Saturday, 14th December 2024

ಪೆಟ್ರೋಲ್, ಡೀಸೆಲ್ ದರದಲ್ಲಿ ಅಲ್ಪ ಹೆಚ್ಚಳ

ನವದೆಹಲಿ: ಸೋಮವಾರ ಬೆಳಿಗ್ಗೆ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೊಮ್ಮೆ ಹೆಚ್ಚಿದೆ. ಪೆಟ್ರೋಲ್ ಬೆಲೆ ಯನ್ನು ರೂ.0.28 ರಿಂದ ರೂ.0.29 ಕ್ಕೆ, ಡೀಸೆಲ್ ದೇಶಾದ್ಯಂತ ರೂ.0.26 ರಿಂದ ರೂ.0.28 ಕ್ಕೆ ಹೆಚ್ಚಳವಾಗಿದೆ.

ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.94.23 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್ ಗೆ ರೂ.85.15 ರೂಗಳಿಗೆ ಮಾರಾಟ ವಾಗುತ್ತಿದೆ. ಮುಂಬೈನಲ್ಲಿ ಕ್ರಮವಾಗಿ ರೂ 100.47 ಮತ್ತು ರೂ 92.45, ಕೋಲ್ಕತ್ತಾದಲ್ಲಿ ಕ್ರಮವಾಗಿ ರೂ 94.25 ಮತ್ತು ರೂ 87.74 ಕ್ಕೆ ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 95.76 ರೂ., ಡೀಸೆಲ್ ಬೆಲೆ 89.90 ರೂಗಳಿಗೆ ಮಾರಾಟವಾಗುತ್ತಿದೆ.

ರಾಜಸ್ಥಾನ ಸರ್ಕಾರವು ಅತಿ ಹೆಚ್ಚು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ವಿಧಿಸುವ ರಾಜ್ಯಗಳ ಪೈಕಿ. ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. ಬಳಿಕ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಆಗಿದೆ.