Wednesday, 11th December 2024

ಹತ್ರಾಸ್ ಶವ ದಹನ ಪ್ರಕರಣ: ವರದಿಗಾರಿಕೆಗೆ ಬಹುಪರಾಕ್

ನವದೆಹಲಿ: ಇತ್ತೀಚೆಗಷ್ಟೇ ಹತ್ರಾಸ್’ನಲ್ಲಿ ದಲಿತ ಯುವತಿ ಶವ ದಹನವನ್ನು ಪ್ರಶ್ನಿಸಿ ವರದಿ ಮಾಡಿದ ಖಾಸಗಿ ಆಂಗ್ಲ ಮಾಧ್ಯಮದ ವರದಿಗಾರ್ತಿಗೆ ಸಾಮಾಜಿಕ ಜಾಲತಾಣ ಟ್ವಿಟರ್’ನಲ್ಲಿ ಭರಪೂರ ಬೆಂಬಲ ಸಿಗುತ್ತಿದೆ.

ಇತ್ತೀಚೆಗಷ್ಟೇ, ಶಾರೂಖ್ ಅಭಿಮಾನಿಗಳೂ, ಇದೇ ಚಾನೆಲ್ ವಿರುದ್ದ ಟೀಕಾ ಪ್ರಹಾರ ನಡೆಸಿದ್ದವು. ಈ ನಿಟ್ಟಿನಲ್ಲಿ ಈ ಖಾಸಗಿ ಚ್ಯಾನೆಲ್ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಚ್ಯಾನೆಲನ್ನು ಬೆಂಬಲಿಸಬೇಕೇ ಬೇಡವೇ ಎಂಬುದರ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಈ ಚ್ಯಾನೆಲ್‍’ನ ವರದಿಗಾರ್ತಿ ಪ್ರತಿಮಾ ಮಿಶ್ರಾ ಅವರ ಕಾರ್ಯವೈಖರಿಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಂತೆಯೇ, ಘಟನೆಯ ನೇರ ಪ್ರಸಾರಕ್ಕೆ ಅಡ್ಡಿ ಮಾಡಿದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.

ನಾನು ನನ್ನ ಜೀವನದಲ್ಲಿ ಇಂತಹ ಉತ್ತಮ ವರದಿಗಾರಿಕೆ ಕಂಡಿಲ್ಲ. ಭೇಷ್ ಪ್ರತಿಮಾ ಮಿಶ್ರಾ. ಈಕೆಯ ವರದಿಗಾರಿಕೆಗೆ ಸರ್ಕಾರ ಕೂಡ ದಂಗಾಗಿ ಹೋಗಿದೆ. ಗುಡ್ ವರ್ಕ್.