Friday, 13th December 2024

Social Media ಬಳಕೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪಾತ್ರ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾನವನಂತೆ ಕಾರ್ಯನಿರ್ವಹಿಸುವುದು. ಅಂದರೆ, ಸಾಮಾನ್ಯ ಮನುಷ್ಯನಂತೆ ಕಲಿಕೆ, ಯೋಜನೆ ರೂಪಿಸುವುದು ಹಾಗೂ ರಚನಾತ್ಮಕ ಕೆಲಸಗಳಿಗೆ ಎತ್ತಿದ ಕೈ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬುದು, ಮಾನವನಂತೆ ಕಾರ್ಯ ನಿರ್ವಹಿಸುವುದಲ್ಲದೆ, ದೈನಂದಿನ ಆಫೀಸ್ ಕೆಲಸದ ಅವಧಿಯನ್ನು ಕಡಿಮೆ ಮಾಡಿದ್ದಲ್ಲದೇ, ಗುಣಮಟ್ಟದ ಕೆಲಸ ನಿಗದಿತ ಅವಧಿಗಿಂತ ಕಡಿಮೆ ಅವಧಿಯಲ್ಲಿ ಮಾಡಿ ಮುಗಿಸುವ ಛಾತಿಯನ್ನು ಹೊಂದಿದೆ.

ನಮ್ಮ ಜೀವನದ ಅವಿಭಾಜ್ಯ ಭಾಗವಾಗಿರುವ ಸ್ಮಾರ್ಟ್ ಫೋನಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ಬಳಕೆ ಬಗ್ಗೆ ತಿಳಿದುಕೊಳ್ಳಬೇಕು.

ಸ್ಮಾರ್ಟ್ ಫೋನಿನ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವುದು.
ಫೋನಿನ ಮೂಲಕ ಒಂದು ಛಾಯಾಚಿತ್ರವನ್ನು ಉತ್ತಮವಾಗಿ ತೆಗೆಯಬಹುದು.
ವಿವಿಧ ಭಾಷೆಯನ್ನು ಸ್ಪಷ್ಟವಾಗಿ ಅರ್ಥೈಸಬಹುದು.
ಒಂದು ಸಂಗೀತದ ಹಿನ್ನೆಲೆಯನ್ನು ಕಂಡುಹಿಡಿಯಲು
ಮೊಬೈಲಿನಲ್ಲಿ ಗೇಮ್ ಆಡುವಾಗ ಮಾರ್ಗದರ್ಶನ ನೀಡುವುದು.

ಅನಾಮಧೇಯ ಛಾಯಾಚಿತ್ರಗಳ ಪತ್ತೆ ಹಚ್ಚುವಿಕೆ

ಮುಖಚರ್ಯೆ ಗುರುತಿಸುವುದು

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನಿನ ಜತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೂಡ ವಿಶೇಷ ಫೀಚರುಗಳಾಗಿ ಬರುತ್ತಿರುವುದು ಪ್ಲಸ್ ಪಾಯಿಂಟ್ ಆಗಿದೆ. ಈ ವಿಚಾರದಲ್ಲಿ ಆಯಾ ಮೊಬೈಲ್ ತಯಾರಿಕಾ ಕಂಪನಿಗಳು ಮೊಬೈಲಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
ಕಾರ್ಯಕ್ಷಮತೆ ಹೆಚ್ಚಿಸಲು ನಿರಂತರವಾಗಿ ಹೊಸ ಸಾಫ್ಟ್ ವೇರ್‌ ನ ಅಭಿವೃದ್ದಿಹಾಗೂ ಹಾರ್ಡ್ ವೇರ್‌ನಲ್ಲಿ ಹೊಸತನ ತರಲು ಯತ್ನಿಸುತ್ತಿವೆ. ಸದ್ಯ ಸ್ಮಾರ್ಟ್ ಫೋನಿನಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ಫೀಚರುಗಳು, ಭದ್ರತೆ, ವಿದ್ಯುತ್ತಿನ ದಕ್ಷತೆ
ಹಾಗೂ ಫೋಟೋಗ್ರಫಿಯತ್ತ ಹೆಚ್ಚಿನ ಗಮನ ನೀಡುತ್ತಿವೆ.

ವ್ಯಾಟ್ಸಪ್‌ ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರಭಾವ
೧) ನಿಮ್ಮಿಚ್ಛೆಯ ಗ್ರೂಪ್ ಚ್ಯಾಟ್ ಮಾಡಬಹುದು
೨) ಮೆಸೇಜ್ ಫೀಲ್ಡ್ ನಲ್ಲಿ @ಮೆಟಾ ಎಐ ಎಂಬುದನ್ನು ಟೈಪ್ ಮಾಡಿ, ಅದನ್ನು ಒತ್ತಿ
೩) ಬಳಿಕ, ಕೂಡಲೇ, ಮೇಟಾದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ನ ನಿಯಮ ಹಾಗೂ ಷರತ್ತುಗಳನ್ನು ಓದಿಕೊಳ್ಳಿ.
೪) ಬಳಿಕ ಮೆಟಾ ಎಈನಲ್ಲಿ ನಿಮ್ಮ ಆಯ್ಕೆ ಮಾಡಿ.
೫) ಈ ಕುರಿತು ನಿಮಗೆ ಸ್ಪಷ್ಟೀಕರಣ ಬೇಕಿದ್ದರೆ, ಅದಕ್ಕಾಗಿ ಸೆಂಡ್ ಐಕಾನ್ ಮೇಲೆ
ಕ್ಲಿಕ್ ಮಾಡಿ.

ವ್ಯಾಟ್ಸಪ್‌, ಫೇಸ್ ಬುಕ್, ಮೆಸ್ಸೆಂಜರ್‌, ಇನ್‌ ಸ್ಟಾಗ್ರಾಂ ಹಾಗೂ ಮೆಟಾ.ಎಐ ಮುಂತಾದ ಪೋರ್ಟ್‌ಲ್‌ ನಲ್ಲಿ ಎಐ ಸಹಾಯಕ ಮೆಟಾ ಎಈ ಇರುವಿಕೆ ಬಗ್ಗೆ ಮೆಟಾ ಇತ್ತೀಚೆಗಷ್ಟೇ ಘೋಷಣೆ ಆಮಡಿದೆ.

ಜನಸಾಮಾನ್ಯರು ಈ ವಿಶೇಷ ಫೀಚರ್‌ ಮೆಟಾ ಎಐ ಬಳಕೆ ಮಾಡಿ, ಚಾಟ್ ಮಾಡುತ್ತ, ಈ ಆಪ್‌ ಮೂಲಕ ಕಂಟೆಂಟ್ ಸಿದ್ದಪಡಿಸಲು, ಕೆಲವು ವಿಚಾರಗಳತ್ತ ವಿವರವಾಗಿ ಅಧ್ಯಯನ ಮಾಡಲು ಬಳಸಬಹುದು.

ವ್ಯಾಟ್ಸಪ್‌ ಗ್ರೂಪ್‌ ಚ್ಯಾಟ್‌ ನಲ್ಲಿ ಮೆಟಾ ಎಐ ಸಹಾಯ ಪಡೆದು, ಪ್ರವಾಸ ಸಂದರ್ಭ, ಒಂದು ರೆಸ್ಟೋರೆಂಟ್ ಕುರಿತು ಮಾಹಿತಿ ಪಡೆಯಬಹುದು. ಒಟ್ಟಿನಲ್ಲಿ, ಮೆಟಾ ಎಐ ಒಂದಕ್ಕಿಂತ ಹೆಚ್ಚು ಆಯ್ಕೆ ನೀಡಬಲ್ಲದು. ಈ ಮೂಲಕ ಬಳಕೆದಾರರಿಗೆ ಮೆಟಾ ಎಐ ಒಂದಕ್ಕಿಂತ ಹೆಚ್ಚು ವಿವಿಧ ರೀತಿಯಲ್ಲಿ ಬಳಕೆಗೆ ಲಭ್ಯವಿದೆ.

*
ಬಳಕೆದಾರರು ವ್ಯಾಟ್ಸ್ ಅಪ್‌ ಸರ್ಚ್ ಬಾರ್‌ ಅನ್ನು ವೈಯಕ್ತಿಕ ಚ್ಯಾಟ್‌ ಗಾಗಿ ಬಳಸುವರು ಅಥವಾ ಇದೇ ವೇದಿಕೆಯಲ್ಲಿ ಮೆಟಾ ಎಐ ಗೆ ಪ್ರಶ್ನೆಯನ್ನು ಕೇಳಬಹುದು.
ಮೆಟಾ ಎಐ ನಿಂದ ಬರುವ ಸಂದೇಶಗಳು ಎಐ ನಿಂದಲೇ ಕಳಿಸಲಾಗುತ್ತದೆ. ಎಂದರೆ ಪ್ರಶ್ನೆಗಳಿಗೆ ಉತ್ತರಿಸಲು ಇದಕ್ಕೆ ಮೆಟಾದ ತಂತ್ರಜ್ಞಾನ ಬಳಕೆಯಾಗುವುದು.

ಆದರೆ, ಇದೇ ಸಂದರ್ಭದಲ್ಲಿ ಬಳಕೆದಾರರು ಈ ಮೊದಲು ಬಳಕೆ ಮಾಡಿದಂತೆ, ವಾಟ್ಸ್ ಅಪ್‌ನ ಫೀಚರ್‌ ಮೆಸೇಜ್‌ ಸರ್ಚ್ ಬಾರಿನಲ್ಲಿ ಚಾಟ್ ಮಾಡುವುದು, ಪೊಟೋ, ವಿಡಿಯೋಗಳು, ಲಿಂಕ್‌ ಗಳು, ಆಡಿಯೋ, ಪೋಲ್ಸ್, ಹಾಗೂ ದಾಖಲೆಗಳನ್ನು ಕಳಿಸಬಹುದು.

ವಾಟ್ಸಪ್ ಗ್ರೂಪಿನಲ್ಲಿ ಮೆಟಾ ಎಐ ಜತೆ ಚಾಟಿಂಗ್ ?
ಬಳಕೆದಾರರು ಮೆಟಾ ಎಐ ನ ವಾಟ್ಸ್ ಪ್‌ ಗ್ರೂಪ್‌ ಚಾಟ್‌ನಲ್ಲಿ ಪ್ರಶ್ನೆ ಕೇಳಬಹುದು ಹಾಗೂ ಸಲಹೆ ಪಡೆಯಬಹುದು. ಇತರರು ಮೆಟಾ ಎಐ ನಲ್ಲಿ ಚಾಟಿಂಗನ್ನು ಗಮನಿಸಬಹುದು ಹಾಗೂ ಮೆಟಾ ಎಐ ನಿಂದ ಬರುವ ಪ್ರತಿಕ್ರಿಯೆಗಳನ್ನು ಕಾಣಬಹುದು.

ಮೆಟಾ ಎಐನಲ್ಲಿ ಪ್ರಕಟವಾಗುವ ಪ್ರಶ್ನೆಗಳನ್ನು ಮಾತ್ರ ಮೆಟಾ ಎಐ ಓದಬಲ್ಲದು ಹಾಗು ಉತ್ತರಿಸಬಲ್ಲದು.

೧) ಎಐ ಬಳಸುವ ಮೂಲಕ ನೀವು ಗ್ರೂಪ್‌ ಚಾಟಿಂಗೆ ಪ್ರವೇಶ ನೀಡಬಲ್ಲಿರಿ.
೨) ಮೆಸೇಜ್ ನ ಸರ್ಚ್ ಬಾರಿನಲ್ಲಿ ಟೈಪ್ ಮಾಡಿ, ಬಳಿಕ ಮೆಟಾ ಎಐ ಅನ್ನು ಕ್ಲಿಕ್‌ ಮಾಡಿ.
೩) ನಿಯಮಗಳನ್ನು ಓದಿ, ಸಮ್ಮತಿಸಿ.
೪) ನಿಮ್ಮ ಪ್ರಶ್ನೆಯನ್ನು ಟೈಪ್ ಮಾಡಿ.
೫) ಪ್ರವೇಶ ಬಟನ್ ಒತ್ತಿ
೬) ಚಾಟ್ ನಲ್ಲಿ ಎಐ ನ ಪ್ರತಿಕ್ರಿಯೆ ಕಾಣುವುದು.

ವಾಟ್ಸ್ ಅಪ್‌ ಬಳಕೆದಾರರ ವೈಯಕ್ತಿಕ ಸಂದೇಶ ಹಾಗೂ ಕರೆಗಳು ಸೋರಿಕೆಯಾಗದಂತೆ ಭದ್ರತೆ ನೀಡಲಾಗುತ್ತದೆ. ಈ ಸಂದೇಶ ಹಾಗೂ ಕರೆಗಳನ್ನು ವಾಟ್ಸ್ ಪ್ ಮಾತ್ರವಲ್ಲ, ಮೆಟಾ ಕೂಡ ನೋಡಲಾಗದು.

ಚಾಟ್ ಮಾಡುವ ಬಳಕೆದಾರರು ಮೆಟಾ ಎಐ ಬಳಸುತ್ತಿದ್ದಂತೆ, ಮೆಟಾವು ಎಐ ಗುಣಮಟ್ಟವನ್ನು ಉತ್ತಮಪಡಿಸಲು ಎಐ ಸಂದೇಶವನ್ನು ಬಳಸಿಕೊಳ್ಳುವುದು.

ಆದರೆ, ಈ ಫೀಚರು ಕೆಲವೇ ದೇಶಗಳಲ್ಲಿ ಲಭ್ಯವಿದೆ. ಕಾರಣ, ಸದ್ಯ ಇಂಗ್ಲಿಷ್ ಭಾಷೆ ಮಾತ್ರ ಬಳಕೆಯಲ್ಲಿದೆ.