Friday, 13th December 2024

600 ಮೆಗಾವ್ಯಾಟ್ ಅಲ್ಟ್ರಾಮೆಗಾ ಸೌರ ವಿದ್ಯುತ್ ಉದ್ಯಾನಕ್ಕೆ ಶಂಕುಸ್ಥಾಪನೆ ನಾಳೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನ.19ರಂದು ಉತ್ತರ ಪ್ರದೇಶದ ಮಹೋಬಾ ಮತ್ತು ಜಾನ್ಸಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.

ನೀರಿನ ಕೊರತೆ ನೀಗಿಸುವ ಮಹತ್ವದ ಉಪಕ್ರಮದಲ್ಲಿ ಪ್ರಧಾನಮಂತ್ರಿಯವರು ಮಧ್ಯಾಹ್ನ ಮಹೋಬಾದಲ್ಲಿ ಬಹು ಯೋಜನೆ ಗಳನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳಲ್ಲಿ ಅರ್ಜುನ್ ಸಹಾಯಕ್ ಯೋಜನೆ, ರತೌಲಿ ಅಣೆಕಟ್ಟೆ ಯೋಜನೆ, ಬಹೌನಿ ಅಣೆಕಟ್ಟೆ ಯೋಜನೆ ಮತ್ತು ಮಜಗಾವ್ –ಚಿಲ್ಲಿ ತುಂತುರು ನೀರಾವರಿ ಯೋಜನೆ ಸೇರಿದೆ. ಈ ಯೋಜನೆಗಳ ಒಟ್ಟು ವೆಚ್ಚ 3250 ಕೋಟಿ ರೂ.ಗೂ ಹೆಚ್ಚಾ ಗಿದ್ದು, ಅವುಗಳ ಕಾರ್ಯಾಚರಣೆ ಮಹೋಬಾ, ಹಮೀರ್ಪುರ್, ಬಂಡಾ ಮತ್ತು ಲಲಿತ್ ಪುರ ಜಿಲ್ಲೆಗಳ ಸುಮಾರು 65000 ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿಯವರು ಝಾನ್ಸಿಯ ಗರೌಥಾದಲ್ಲಿ 600 ಮೆಗಾವ್ಯಾಟ್ ಅಲ್ಟ್ರಾಮೆಗಾ ಸೌರ ವಿದ್ಯುತ್ ಉದ್ಯಾನಕ್ಕೆ ಶಂಕುಸ್ಥಾಪನೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದನ್ನು 3000 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.