Friday, 13th December 2024

Somy Ali : ಭೂಗತ ಜಗತ್ತಿನ ಬೆದರಿಕೆ ನೆನಪಿಸಿಕೊಂಡ ಸಲ್ಮಾನ್‌ ಖಾನ್‌ ಮಾಜಿ ಗೆಳತಿ!

Somy Ali

ಮುಂಬೈ: ಇತ್ತೀಚೆಗೆ ಸಲ್ಮಾನ್‌ ಖಾನ್‌ (Salman Khan) ವಿಚಾರದಲ್ಲಿ ಚರ್ಚೆಯಲ್ಲಿರುವ ನಟಿ ಸೋಮಿ ಅಲಿ (Somy Ali) ಮತ್ತೊಂದು ವಿಷಯವನ್ನು ಬಹಿರಂಗಪಡಿಸಿದ್ದಾರೆ. 90ರ ದಶಕದಲ್ಲಿ ಸಲ್ಮಾನ್‌ಗೆ ಭೂಗತ ಜಗತ್ತಿನಿಂದ ಕರೆ ಬರುತ್ತಿದ್ದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಸಲ್ಮಾನ್‌ ಖಾನ್‌ ಜೊತೆಗಿನ ರಿಲೇಷನ್‌ಶಿಪ್‌ ಬಗ್ಗೆ ಹೇಳಿದ್ದ ನಟಿ ಈಗ ಭೂಗತ ಪಾತಕಿಗಳ ಫೋನ್‌ ಕಾಲ್‌ (threatening call from the underworld) ಬಗ್ಗೆ ಮಾತನಾಡಿದ್ದಾರೆ.

1990ರ ದಶಕದಲ್ಲಿ ಸಲ್ಮಾನ್ ಅವರೊಂದಿಗಿನ ರಿಲೇಷನ್‌ಶಿಪ್‌ ಸಮಯದಲ್ಲಿ, ದಾವೂದ್ ಇಬ್ರಾಹಿಂ ಬಾಲಿವುಡ್‌ನೊಂದಿಗೆ ಸಂಬಂಧ ಹೊಂದಿದ್ದ ಎಂದು ಅವರು ಹೇಳಿದ್ದಾರೆ. ನಿರೂಪಕರು ಚಲನಚಿತ್ರೋದ್ಯಮದೊಂದಿಗಿನ ದಾವೂದ್‌ ಸಂಪರ್ಕದ ಬಗ್ಗೆ ಯಾವುದೇ ಚರ್ಚೆಗಳಿಗೆ ಸಾಕ್ಷಿಯಾಗಿದ್ದೀರಾ ಅಥವಾ ಕೇಳಿದ್ದೀರಾ ಎಂದು ಕೇಳಿದಾಗ, ಸೋಮಿ , “ನಾನು ಅವರ ಬಗ್ಗೆ ಹಲವಾರು ಸಂಭಾಷಣೆಗಳನ್ನು ಕೇಳಿದ್ದೇನೆ. ಆದರೆ ಯಾರೂ ದಾವೂದ್‌ನ ಹೆಸರನ್ನು ನೇರವಾಗಿ ಹೇಳಲಿಲ್ಲʼʼ ಎಂದು ಹೇಳಿದ್ದಾರೆ.

ನಂತರ ಭೂಗತ ಜಗತ್ತಿನ ಬಗ್ಗೆ ಮಾತು ಮುಂದುವರಿಸಿದ ಅವರು “ದಿವ್ಯಾ ಭಾರತಿ ನನ್ನ ಆತ್ಮೀಯ ಸ್ನೇಹಿತೆ. ಬೆಂಗಳೂರಿನಲ್ಲಿ ‘ಆಂದೋಲನ್’ ಚಿತ್ರೀಕರಣದ ವೇಳೆ ನಾವು ತುಂಬಾ ಆತ್ಮೀಯರಾದೆವು. ನಾನು ದಿವ್ಯಾಳನ್ನು ಭೂಗತ ಜಗತ್ತು‌ ಅಂದರೆ ಏನೆಂದು ಕೇಳಿದ್ದೆ. ಅಮೆರಿಕಾದಲ್ಲಿ ಇಟಾಲಿಯನ್ ಮಾಫಿಯಾ ಇದೆ ಎಂದು ಅವಳಿಗೆ ಹೇಳಿದೆ. ಅವಳು ನನಗೆ ಭೂಗತ ಜಗತ್ತು ಮತ್ತು ಮಾಫಿಯಾ ಒಂದೇ ಎಂದು ಹೇಳಿದ್ದಳು. ಆಗ ನನಗೆ ಅಷ್ಟಾಗಿ ಅದರ ಬಗ್ಗೆ ಗೊತ್ತಿರಲಿಲ್ಲʼʼ ಎಂದು ಹೇಳಿದ್ದಾರೆ

ಸಲ್ಮಾನ್‌ ಜೊತೆಗಿನ ರಿಲೇಷನ್‌ಶಿಪ್‌ ಬಗ್ಗೆ ಮಾತನಡಿದ ಅವರು, ನಾನು ಸಲ್ಮಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಮೂರು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದೆವು. ಒಮ್ಮೆ, ನಮ್ಮ ಬೆಡ್‌ರೂಮ್‌ನ ಲ್ಯಾಂಡ್‌ಲೈನ್‌ಗೆ ಕರೆ ಬಂದಿತು. ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ನನ್ನನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದರು. ‘ಸಲ್ಮಾನ್ ಕೋ ಬೋಲ್ ದೇನಾ, ಸೋಮಿ ಅಲಿ ಕೊ ಹಮ್ ಉಟಾ ಕರ್ ಲೇ ಜಾಯೇಂಗೆ (ಸೋಮಿ ಅಲಿಯನ್ನು ಅಪಹರಿಸುತ್ತೇವೆ ಎಂದು ಸಲ್ಮಾನ್‌ಗೆ ಹೇಳಿ). ಈ ಬಗ್ಗೆ ಸಲ್ಮಾನ್‌ಗೆ ಹೇಳಿದಾಗ ಅವರು ಗಾಬರಿಯಾದರೂ ಪರಿಸ್ಥಿತಿಯನ್ನು ನಿಭಾಯಿಸಿದರು. ಆದರೆ, ಅವರು ಅದನ್ನು ಹೇಗೆ ನಿಭಾಯಿಸಿದರು ಎಂದು ಹೇಳಲೇ ಇಲ್ಲ. ನಿನಗೆ ಈಗ ಅದರ ಬಗ್ಗೆ ಬೇಡ ಎಂದು ಹೇಳಿ ಸುಮ್ಮನಾದರುʼʼ ಎಂದು ಸೋಮಿ ಹೇಳಿದ್ದಾರೆ.

ಇದನ್ನೂ ಓದಿ : Salman Khan: ʻಸಲ್ಮಾನ್‌ ಖಾನ್‌ಗಿಂತ ಲಾರೆನ್ಸ್‌ ಬಿಷ್ಣೋಯ್‌ ಬೆಟರ್‌ʼ- ಮಾಜಿ ಪ್ರೇಯಸಿ ಬಿಚ್ಚಿಟ್ಳು ಭಾಯ್‌ಜಾನ್‌ ಕುರಿತ ಶಾಕಿಂಗ್‌ ಸಂಗತಿ

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಸಲ್ಮಾನ್‌ ಲಾರೆನ್ಸ್‌ ಬಿಷ್ಣೋಯ್‌ಗಿಂತ ಕೆಟ್ಟವನು ಎಂದು ಸೋಮಿ ಹೇಳಿದ್ದಾರೆ. ತನಗೆ ದೈಹಿಕ ಹಾಗೂ ಮಾನಸಿಕವಾಗಿ ಸಲ್ಮಾನ್‌ ಸಾಕಷ್ಟು ಹಿಂಸೆ ನೀಡಿದ್ದ. ನನಗೆ ಮಾತ್ರವಲ್ಲ ಐಶ್ವರ್ಯ ರೈಗೂ ಸಾಕಷ್ಟು ಹಿಂಸೆ ನೀಡಿದ್ದ, ಆಕೆಯ ಬೆನ್ನು ಮೂಳೆ ಮುರಿಯುವ ರೀತಿಯಲ್ಲಿ ಹೊಡೆದಿದ್ದ ಎಂದು ಹೇಳಿದ್ದಾರೆ.