Wednesday, 11th December 2024

‘ಸ್ಪುಟ್ನಿಕ್ ವಿ’ ಲಸಿಕೆ ದೆಹಲಿಯಲ್ಲಿ ಶೀಘ್ರದಲ್ಲೇ ಲಭ್ಯ: ಅರವಿಂದ್ ಕೇಜ್ರಿವಾಲ್

ನವದೆಹಲಿ: ರಷ್ಯಾದ ಲಸಿಕೆ ‘ಸ್ಪುಟ್ನಿಕ್ ವಿ’ ಶೀಘ್ರದಲ್ಲೇ ದೆಹಲಿಯಲ್ಲಿ ಲಭ್ಯವಾಗಲಿದ್ದು, ಲಸಿಕೆ ತಯಾರಕರು ಜೂನ್ 20 ರ ನಂತರ ರಾಷ್ಟ್ರ ರಾಜಧಾನಿಗೆ ರವಾನೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.

ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ ಸರ್ಕಾರ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕೇಳಿದಾಗ, ಆನ್‌ಲೈನ್ ಪೋರ್ಟಲ್‌ ನಲ್ಲಿನ ಕೆಲವು ಸಮಸ್ಯೆಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದರು.

ಪತ್ರಕರ್ತರು ಮತ್ತು ಅವರ ಕುಟುಂಬ ಸದಸ್ಯರಿಗೆ ಉಚಿತ ವ್ಯಾಕ್ಸಿನೇಷನ್ ಸೌಲಭ್ಯವನ್ನು ಉದ್ಘಾಟಿಸಿದರು. ‘ಪತ್ರಕರ್ತರು ಮತ್ತು ಅವರ ಕುಟುಂಬ ಸದಸ್ಯರಿಗೆ 45 ವರ್ಷ ಮತ್ತು 18-44 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕಲು ನಾವು ಈ ಸೌಲಭ್ಯವನ್ನು ಪ್ರಾರಂಭಿಸಿದ್ದೇವೆ’ ಎಂದು ಕೇಜ್ರಿವಾಲ್ ಹೇಳಿದರು.

ರಷ್ಯಾದ ಸ್ಪುಟ್ನಿಕ್ ವಿ ಭಾರತದಲ್ಲಿ ಅನುಮೋದನೆ ಪಡೆಯುವ ಮೂರನೇ ಕೋವಿಡ್ -19 ಲಸಿಕೆಯಾಗಿದೆ.