Friday, 13th December 2024

ಮೋದಿ ಜಿ…ದಯವಿಟ್ಟು ಉತ್ತಮ ಶಾಲೆ ನಿರ್ಮಿಸಿ: ಪುಟ್ಟ ಬಾಲಕಿಯ ವೈರಲ್ ವೀಡಿಯೊ

ಶ್ರೀನಗರ: ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಪುಟ್ಟ ಬಾಲಕಿ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ತನ್ನ ಶಾಲೆಯ ಬಗ್ಗೆ ಏನಾದರೂ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿ ದ್ದಾಳೆ.

ದಯವಿಟ್ಟು ನಮಗಾಗಿ ಉತ್ತಮ ಶಾಲೆಯನ್ನು ನಿರ್ಮಿಸಿ ಎಂದು ಹುಡುಗಿ ಫೇಸ್‌ಬುಕ್‌ನಲ್ಲಿ ಸುಮಾರು 2 ಮಿಲಿ ಯನ್ ವೀಕ್ಷಣೆಗಳನ್ನು ಪಡೆದ ವೈರಲ್ ವೀಡಿಯೊದಲ್ಲಿ ವಿನಂತಿಸಿದ್ದಾಳೆ.

ನಾಲ್ಕೂವರೆ ನಿಮಿಷಗಳ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ‘ಮಾರ್ಮಿಕ್ ನ್ಯೂಸ್’ ಹೆಸರಿನ ಪುಟ ಹಂಚಿಕೊಂಡಿದೆ. ಬಳಕೆ ದಾರರಿಂದ ಸುಮಾರು 6,000 ಕಾಮೆಂಟ್‌ಗಳನ್ನು ಪಡೆದುಕೊಂಡಿದೆ ಮತ್ತು ಅವಳ ‘ಕೆಚ್ಚೆದೆಯ’ ಮನವಿಯನ್ನು ಶ್ಲಾಘಿಸಿದ್ದಾರೆ.

ಲೋಹೈ-ಮಲ್ಹಾರ್ ಗ್ರಾಮದ ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸೀರತ್ ನಾಜ್ ಎಂದು ಪರಿಚಯಿಸಿಕೊಳ್ಳುವ ಹುಡುಗಿ ತನ್ನ ವಿನಂತಿ ಯನ್ನು ಪ್ರಾರಂಭಿಸುತ್ತಾಳೆ.