Saturday, 14th December 2024

ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ನಿಧನ

ಮುಂಬಯಿ: ಎಲ್ಗಾರ್ ಪರಿಷದ್ ಮಾವೋವಾದಿಗಳ ಸಂಪರ್ಕ ಪ್ರಕರಣದ ಆರೋಪಿ, ಭಯೋತ್ಪಾದನಾ ವಿರೋಧಿ ಕಾನೂನಿನಡಿ ಬಂಧಿಸಲ್ಪಟ್ಟಿದ್ದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ (84) ಸೋಮವಾರ ಮೃತಪಟ್ಟಿದ್ದಾರೆ.

ಬಾಂಬೆ ಹೈಕೋರ್ಟ್ ನಲ್ಲಿ ಸ್ಟಾನ್ ಸ್ವಾಮಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುವ ಮೊದಲೇ ನಿಧನರಾಗಿದ್ದಾರೆ. ಸ್ಟಾನ್ ಅವರು ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದು, ವೆಂಟಿಲೇರ್ ನಲ್ಲಿದ್ದರು. ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ನಿಧನರಾಗಿರುವುದಾಗಿ ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಯ ನಿರ್ದೇಶಕರು ಬಾಂಬೆ ಹೈಕೋರ್ಟ್ ನ ಜಸ್ಟೀಸ್ ಎಸ್ ಎಸ್ ಶಿಂಧೆ ಮತ್ತು ಜಸ್ಟೀಸ್ ಎನ್ ಜೆ ಜಾಮಾದಾರ್ ನೇತೃತ್ವದ ಪೀಠಕ್ಕೆ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.

ಭಾನುವಾರ ಸ್ವಾಮಿ ಅವರು ಹೃದಯ ಸ್ತಂಭನಕ್ಕೊಳಗಾಗಿದ್ದರು. ನಂತರ ಅವರನ್ನು ವೆಂಟಿಲೇಟರ್ ಸಪೋರ್ಟ್ ನಲ್ಲಿ ಇರಿಸಲಾಗಿತ್ತು ಎಂದು ಡಾ.ಐಯಾನ್ ಡಿಸೋಜಾ ಕೋರ್ಟ್ ಗೆ ವಿವರ ನೀಡಿದ್ದಾರೆ.