Wednesday, 11th December 2024

ಸಿಆರ್‌ಪಿಎಫ್ ವಾಹನದ ಮೇಲೆ ಕಲ್ಲು ತೂರಾಟ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್ ಕರ್ತವ್ಯಕ್ಕೆ ತೆರಳುತ್ತಿದ್ದ ಸಿಆರ್‌ಪಿಎಫ್ ವಾಹನದ ಮೇಲೆ ಶುಕ್ರವಾರ  ದುಷ್ಕರ್ಮಿಗಳಿಂದ ಕಲ್ಲಿನ ತೂರಾಟ ನಡೆದಿದೆ.

ಮಧ್ಯ ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಚಾಡೂರಾದ ಕ್ರಾಲ್ಪೋರಾ ಪ್ರದೇಶದಲ್ಲಿ  ದುಷ್ಕರ್ಮಿಗಳನ್ನು ಚದುರಿಸಲು ಸಿಆರ್‌ಪಿಎಫ್ ಗಾಳಿಯಲ್ಲಿ ಮೂರು ಸುತ್ತಿನ ಗುಂಡನ್ನು ಹಾರಿಸಿದೆ.

ಪೊಲೀಸರ ಮಾಹಿತಿಯ ಪ್ರಕಾರ, ಯೋಧರು ಕೋವಿಡ್-19 ಕರ್ತವ್ಯ ನಿರ್ವಹಣೆಗಾಗಿ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯಲ್ಲಿ ಯೋಧರಿಗೆ ಯಾವುದೇ ಗಾಯವುಂಟಾಗಿಲ್ಲ ಎಂದು ತಿಳಿಸಿದೆ.

ಶುಕ್ರವಾರ ಸಿಆರ್‌ಪಿಎಫ್ ವಾಹನದ ಮೇಲೆ ಚಾಡೂರಾದಲ್ಲಿ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದರು. ಅವರನ್ನು ಚದುರಿಸಲು ಸೈನ್ಯವು ಎರಡರಿಂದ ಮೂರು ಸುತ್ತಿನ ಗುಂಡನ್ನು ಗಾಳಿಯಲ್ಲಿ ಹಾರಿಸಿದೆ.