Friday, 13th December 2024

ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

ರಾಯ್‌ಪುರ: ರಾಯ್‌ಪುರದ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌‍ ಆಫ್‌ ಮೆಡಿಕಲ್‌ ಸೈನ್ಸಸ್‌‍ (ಎಐಐಎಂಎಸ್‌‍) ಕ್ಯಾಂಪಸ್‌‍ನಲ್ಲಿರುವ ಹಾಸ್ಟೆಲ್‌ ಕೋಣೆಯಲ್ಲಿ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಂಬಿಬಿಎಸ್‌‍, ಪಿಜಿ ಇಂಟರ್ನ್‌ ಆಗಿದ್ದ ಮೃತ ರಂಜೀತ್‌ ಭೋಯರ್‌(25) ಮೃತರು. ಈತ ಮೂಲತಃ ಒಡಿಶಾದ ಭುವನೇಶ್ವರದವನೆಂದು ಗೊತ್ತಾಗಿದೆ. ಈತ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಅವರು ಮಿತಿಮೀರಿದ ಔಷಧಗಳನ್ನು ಸೇವಿಸಿದ್ದರು ಎಂದು ಪ್ರಾಥಮಿಕ ತನಿಖೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಟಿಟ್ಯೂಟ್‌ನ ಕ್ಯಾಂಪಸ್‌‍ನಲ್ಲಿರುವ ಬಾಲಕರ ಹಾಸ್ಟೆಲ್‌ನಲ್ಲಿ ಕೋಣೆಯಲ್ಲಿ ಭೋಯರ್‌ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಗ್ಗೆ ಕೆಲವು ಸ್ನೇಹಿತರು ನೋಡಿದ್ದಾರೆ ತಕ್ಷಣ ಹಾಸ್ಟೆಲ್‌ ವಾರ್ಡನ್‌ಗೆ ಮಾಹಿತಿ ನೀಡಿದ್ದು ಅಲ್ಲಿಗೆ ದಾವಿಸಿದ ವೈದ್ಯರು ಪರೀಕ್ಷಿಸಿದಾಗ ಅವರು ಕೊನೆಯುಸಿರೆಳೆದಿರುವುದು ಕಂಡುಬಂದಿದೆ ಎಂದು ಅಮಾನಕ ಪೊಲೀಸ್‌‍ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.