Wednesday, 11th December 2024

‘ಜೈ ಶ್ರೀರಾಮ’ನ ಘೋಷಣೆ ಪ್ರಕರಣ: ವಿದ್ಯಾರ್ಥಿಗಳಿಗೆ 2 ದಿನಗಳ ಅಮಾನತು

ನಬಾದ (ಜಾರ್ಖಂಡ್): ‘ಜೈ ಶ್ರೀರಾಮ’ನ ಘೋಷಣೆ ಮಾಡಿದ ಪ್ರಕರಣದಲ್ಲಿ ಬೊಕಾರ ಜಿಲ್ಲೆಯಲ್ಲಿನ ಗೊಮಿಯಾದಲ್ಲಿ ಲಾಯೋಲಾ ಮಿಷನರಿ ಶಾಲೆಯ ಮುಖ್ಯೋಪಾಧ್ಯಾ ಯರು ೧೦ ನೇ ತರಗತಿಯ ವಿದ್ಯಾರ್ಥಿಗಳನ್ನು ೨ ದಿನಗಳಿಗೆ ಅಮಾನತು ಗೊಳಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಈ ಪ್ರಕರಣದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಬಳಿ ಒತ್ತಯಿಸಿದೆ.

ಮಿಷನರಿ ಶಾಲೆಯ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳ ಅಶಿಸ್ತತನ ಮತ್ತು ಶಿಕ್ಷಕರ ಆದೇಶದ ಉಲ್ಲಂಘನೆ ಮಾಡಿರುವು ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ತರಗತಿಯಲ್ಲಿನ ಫಲಕದ ಮೇಲೆ ‘ಜೈ ಶ್ರೀರಾಮ’ ಬರೆದಿದ್ದರಿಂದ ವಿದ್ಯಾರ್ಥಿಗಳಿಗೆ ಅಮಾನ ವೀಯವಾಗಿ ಥಳಿಸಲಾಗಿತ್ತು.