Friday, 13th December 2024

ವ್ಯಕ್ತಿ, ಮಹಿಳೆಯಿಂದ ಕೋರ್ಟ್ ಹೊರಗೆ ಆತ್ಮಹತ್ಯೆಗೆ ಯತ್ನ

Supreme Court

ನವದೆಹಲಿ: ಒಬ್ಬ ವ್ಯಕ್ತಿ ಮತ್ತು ಮಹಿಳೆ ಸುಪ್ರೀಂ ಕೋರ್ಟ್ ಹೊರಗೆ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಈ ಕೃತ್ಯದ ಹಿಂದಿನ ಕಾರಣ ತಿಳಿದು ಬಂದಿಲ್ಲ. ಪ್ರಾಥಮಿಕವಾಗಿ, ಪುರುಷ ಮತ್ತು ಮಹಿಳೆ ತಮ್ಮನ್ನು ತಾವು ಬೆಂಕಿ ಹಚ್ಚಿಕೊಳ್ಳುವ ಮೊದಲು ತಮ್ಮ ಮೇಲೆ ಸೀಮೆ ಎಣ್ಣೆ ಸುರಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿ ನಿಯೋಜಿಸಲಾಗಿರುವ ಪೊಲೀಸ್ ತಂಡವು ಪುರುಷ ಮತ್ತು ಮಹಿಳೆಯನ್ನು ರಕ್ಷಿಸಲು ಪ್ರಯತ್ನ ಪಟ್ಟವು. ತಂಡವು ಬೆಂಕಿ ನಂದಿಸುವಲ್ಲಿ ಯಶಸ್ವಿ ಯಾಯಿತು ಮತ್ತು ತಕ್ಷಣವೇ ಸಂತ್ರಸ್ತರನ್ನು ಚಿಕಿತ್ಸೆಗಾಗಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಿತು ಎಂದು ಉಪ ಪೊಲೀಸ್ ಆಯುಕ್ತ ದೀಪಕ್ ಯಾದವ್ ಹೇಳಿದರು.