Wednesday, 11th December 2024

ಕನ್ನಡದಲ್ಲಿ ಟ್ವೀಟ್ ಮಾಡಿದ ಸುರ್ಜೇವಾಲಾ

ನವದೆಹಲಿ: ಕರ್ನಾಟಕ ಕಾಂಗ್ರೆಸ್’ನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ರೈತ ಸಂಘಗಳ ಬಂದ್ ಕರೆಗೆ ಕಾಂಗ್ರೆಸ್ ಬೆಂಬಲ ಇದೆ ಎಂದಿರುವ ಸುರ್ಜೇವಾಲಾ, ರೈತರ ಜೀವನ – ಜೀವನಧಾರ ಕಸಿಯಲು ಮೋದಿ- ಯಡಿಯೂರಪ್ಪ ಸರ್ಕಾರದ ಪ್ರಯತ್ನ ನಡೆಸಿವೆ. ಭೂಸುಧಾರಣೆ- ಎಪಿಎಂಸಿ ಕಾಯ್ದೆಯೇ ಸರಿ ಇಲ್ಲ. ಇದು ರೈತರನ್ನು ಗುಲಾಮರನ್ನಾಗಿ ಮಾಡುವ ಪಿತೂರಿಯಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಸುರ್ಜೇವಾಲಾ ಗರಂ ಆದರು.