Friday, 13th December 2024

ಪಿಟೀಲು ವಾದಕ ಟಿಎನ್ ಕೃಷ್ಣನ್ ಇನ್ನಿಲ್ಲ

ಚೆನ್ನೈ: ಪಿಟೀಲು ವಾದಕ ಟಿಎನ್ ಕೃಷ್ಣನ್(92 )ನಿಧನರಾಗಿದ್ದು, ಅವರ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

ಟಿಎನ್ ಕೃಷ್ಣನ್ ನಿಧನರಾಗಿದ್ದು, ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಇಂದು ತಮ್ಮ ಚೆನ್ನೈ ನಿವಾಸದಲ್ಲಿ ದೇಹತ್ಯಾಗ ಮಾಡಿದ್ದಾರೆ.

‘ಖ್ಯಾತ ಪಿಟೀಲು ವಾದಕ ಶ್ರೀ ಟಿ.ಎನ್.ಕೃಷ್ಣನ್ ಅವರ ನಿಧನವು ಸಂಗೀತ ಜಗತ್ತಿನಲ್ಲಿ ದೊಡ್ಡ ನಷ್ಟವನ್ನುಂಟು ಮಾಡಿದೆ. ಅವರು ತಮ್ಮ ವಾದನದ ಮೂಲಕವೇ ನಮ್ಮ ಸಂಸ್ಕೃತಿಯ ವ್ಯಾಪಕವಾದ ಭಾವನೆಗಳನ್ನು ಮತ್ತು ಎಳೆಗಳನ್ನು ಸುಂದರವಾಗಿ ಬಿಡಿಸಿದ್ದರು. ಅವರು ಯುವ ಸಂಗೀತಗಾರರಿಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಸಾವಿನ ನೋವು ತಡೆಯುವ ಶಕ್ತಿ ದೊರೆಯಲಿ ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.