Saturday, 5th October 2024

ತೃಣಮೂಲ ಕಾಂಗ್ರೆಸ್ ನಾಯಕರ ಮೇಲೆ ತಾಲಿಬಾನಿ ಶೈಲಿಯ ದಾಳಿ ನಡೆಸಿ: ರುಣ್ ಚಂದ್ರ ಭೌಮಿಕ್ ವಿವಾದ

ಅಗರ್ತಲಾ: ಅಗರ್ತಲಾ ವಿಮಾನ ನಿಲ್ದಾಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ಅವರ ಮೇಲೆ ತಾಲಿಬಾನಿ ಶೈಲಿಯ ದಾಳಿಗಳನ್ನು ನಡೆಸಿ ಎಂದು ಬೆಂಬಲಿಗರಿಗೆ ಕರೆ ನೀಡುವ ಮೂಲಕ ತ್ರಿಪುರಾ ಬಿಜೆಪಿ ಶಾಸಕ ಅರುಣ್ ಚಂದ್ರ ಭೌಮಿಕ್ ವಿವಾದಕ್ಕೀಡಾಗಿದ್ದಾರೆ.

ತ್ರಿಪುರಾದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವೆ ಪ್ರತಿಮಾ ಭೌಮಿಕ್ ಅವರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ‘ಪಶ್ಚಿಮ ಬಂಗಾಳದ ಟಿಎಂಸಿ ನಾಯಕರು ತಮ್ಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರಚೋದನೆಯಿಂದ ತ್ರಿಪುರಾದ ಬಿಪ್ಲಬ್-ದೇವ್ ನೇತೃತ್ವದ ಬಿಜೆಪಿ ಸರಕಾರಕ್ಕೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ,” ಎಂದು ಆರೋಪಿಸಿ, ಟಿಎಂಸಿ ನಾಯಕರ ಮೇಲೆ ತಾಲಿಬಾನಿ ಶೈಲಿಯ ದಾಳಿ ನಡೆಸುವಂತೆ ಕೋರುತ್ತೇನೆ. ಅವರ ಮೇಲೆ ತಾಲಿಬಾನಿ ಶೈಲಿಯಲ್ಲಿ ದಾಳಿ ನಡೆಸಬೇಕಿದೆ ಎಂದು ವರದಿಯಾಗಿದೆ.

ಭಾಷಣದ ವೀಡಿಯೋ ಕ್ಲಿಪ್ ವೈರಲ್ ಆಗಿದ್ದು ಅವರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೊಳಗಾಗಿದೆ. ಟಿಎಂಸಿ ನಾಯಕರೂ ಹೇಳಿಕೆಯನ್ನು ಖಂಡಿಸಿ ದ್ದಾರೆ.