Saturday, 14th December 2024

ತಮಿಳುಸಾಯಿ ಸೌಂದರರಾಜನ್ ಅಧಿಕಾರ ಸ್ವೀಕಾರ

ಪುದುಚೆರಿ: ತಮಿಳುಸಾಯಿ ಸೌಂದರರಾಜನ್ ಅವರು ಗುರುವಾರ ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಈಗಾಗಲೇ ತೆಲಂಗಾಣ ಸರ್ಕಾರದ ರಾಜ್ಯಪಾಲ ತಮಿಳುಸಾಯಿ ಸೌಂದರರಾಜನ್ ಅವರಿಗೆ ಪುದುಚೆರಿ ಗವರ್ನರ್ ಆಗಿ ಹೆಚ್ಚುವರಿ ಹುದ್ದೆಯ ಜವಾಬ್ದಾರಿ ನೀಡಲಾಗಿದೆ.

ಪುದುಚೆರಿಯ ರಾಜನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರದ ಗೌಪ್ಯತೆ ಪ್ರಮಾಣವಚನ ಬೋಧಿಸಲಾಯಿತು. ಸಿಎಂ ವಿ ನಾರಾಯಣಸಾಮಿ ಈ ಸಂದರ್ಭದಲ್ಲಿ ಹಾಜರಿದ್ದರು. ಪುದುಚೆರಿಯ ಗವರ್ನರ್ ಆಗಿದ್ದ ಕಿರಣ್ ಬೇಡಿಯನ್ನು ಇತ್ತೀಚೆಗೆ ಗವರ್ನರ್ ಹುದ್ದೆಯಿಂದ ವಜಾಗೊಳಿಸಲಾಗಿತ್ತು.