Saturday, 14th December 2024

ತಮಿಳುನಾಡಿನಲ್ಲಿ ಜ.14ರವರೆಗೂ ವರುಣನ ಅಬ್ಬರ

ಚೆನ್ನೈ: ತಮಿಳುನಾಡಿನ ಹಲವು ಭಾಗಗಳಲ್ಲಿ ಕಳೆದ ಸೋಮವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನವರಿ 14ರವರೆಗೂ ವರುಣನ ಅಬ್ಬರ ಮುಂದುವರೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ತಮಿಳುನಾಡಿನ ಅತಿರಾಮಪಟ್ಟಣಂ (13.5 ಸೆಂ.ಮೀ), ಅರಿಯಲೂರು (10 ಸೆಂ.ಮೀ), ನಾಗಪಟ್ಟಣಂ (8 ಸೆಂ.ಮೀ) ಮತ್ತು ಕಾರೈ ಕಲ್​ನಲ್ಲಿ (6.3 ಸೆಂ.ಮೀ.) ಅತಿ ಹೆಚ್ಚು ಮಳೆಯಾಗಿದೆ ಎಂದು ಐಎಂಡಿ ಟ್ವೀಟ್​ ಮಾಡಿದೆ. ತಿರುನೆಲ್ವೇಲಿ, ಕನ್ಯಾಕುಮಾರಿ, ಮಧುರೈ, ತೂತುಕುಡಿ, ವಿರುಧುನಗರ ಮತ್ತು ರಾಮನಾಥಪುರಂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗಲಿದೆ.