Saturday, 14th December 2024

ಟಾಟಾ ಇಂಟರ್ ನ್ಯಾಷನಲ್ ನೂತನ ಎಂಡಿ ರಾಜೀವ್ ಸಿಂಘಾಲ್ ನೇಮಕ

ನವದೆಹಲಿ: ಟಾಟಾ ಇಂಟರ್ ನ್ಯಾಷನಲ್ ನೂತನ ಎಂಡಿ ಆಗಿ ರಾಜೀವ್ ಸಿಂಘಾಲ್ ನೇಮಕಗೊಂಡಿದ್ದಾರೆ.

ಟಾಟಾ ಸಮೂಹದ ಜಾಗತಿಕ ವ್ಯಾಪಾರ ಮತ್ತು ವಿತರಣಾ ವಿಭಾಗವಾದ ಟಾಟಾ ಇಂಟರ್ನ್ಯಾಷನಲ್ ಸೋಮವಾರ ರಾಜೀವ್ ಸಿಂಘಾಲ್ ಅವರನ್ನು ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ನೇಮಕ ಮಾಡಿದೆ.

ಮಾರ್ಚ್ 31, 2024 ರಂದು ನಿವೃತ್ತರಾದ ಆನಂದ್ ಸೇನ್ ಅವರ ಉತ್ತರಾಧಿಕಾರಿಯಾಗಿ ಸಿಂಘಾಲ್ ಅವರ ನೇಮಕಾತಿ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಟಾಟಾ ಇಂಟರ್ನ್ಯಾಷನಲ್ ಹೇಳಿಕೆಯಲ್ಲಿ ತಿಳಿಸಿದೆ.

ಇದಕ್ಕೂ ಮೊದಲು ಸಿಂಘಾಲ್ ಟಾಟಾ ಇಂಟರ್ನ್ಯಾಷನಲ್ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಒಒ) ಆಗಿದ್ದರು.