Saturday, 14th December 2024

15 ಟಿಡಿಪಿ ಶಾಸಕರ ಅಮಾನತು

ಹೈದರಾಬಾದ್: 15 ಟಿಡಿಪಿ ಶಾಸಕರನ್ನು ಒಂದೇ ದಿನ ಎಪಿ ವಿಧಾನಸಭೆ ಅಧಿವೇಶನದಿಂದ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಅಮಾನತುಗೊಳಿಸಿದ್ದಾರೆ.

ವಿಧಾನಸಭೆಗೆ ಅಗೌರವದಿಂದ ವರ್ತಿಸಿದ್ದಾರೆ ಎಂಬ ಆರೋಪದ ಮೇಲೆ ಅಚ್ಚೆನಾಯ್ಡು, ಬಾಲಕೃಷ್ಣ, ಸತ್ಯಪ್ರಸಾದ್ ಮತ್ತು ವೈಸಿಪಿ ಬಂಡಾಯ ಶಾಸಕ ಕೋಟಂರೆಡ್ಡಿ ಶ್ರೀಧರ್ ರೆಡ್ಡಿ ಸೇರಿದಂತೆ 15 ಟಿಡಿಪಿ ಸದಸ್ಯರನ್ನು ಸ್ಪೀಕರ್‌ ಅಮಾನತುಗೊಳಿಸಿದರು.

ಚಂದ್ರಬಾಬು ಬಂಧನದ ಕುರಿತು ಚರ್ಚೆಗೆ ಆಗ್ರಹಿಸಿ ಟಿಡಿಪಿ ಸದಸ್ಯರು ಸ್ಪೀಕರ್‌ ವೇದಿಕೆ ಬಳಿ ಬಂದು ಗಲಾಟೆ ಮಾಡಿದ್ದಲ್ಲದೆ, ಮೈಕ್‌ ಕಿತ್ತೆಸೆಯಲು ಪ್ರಯತ್ನಿಸಿ ದರು. ಅಷ್ಟೇ ಅಲ್ಲದೆ ಸ್ಪೀಕರ್‌ ಎದುರೇ ಮೀಸೆ ತಿರುವಿ ದರ್ಪ ತೋರಿ ಸದನದ ಸಂಪ್ರದಾಯಗಳನ್ನು ಉಲ್ಲಂಘಿಸಿದ್ದಾರೆ ಎಂದು ಸ್ಪೀಕರ್ ಆಕ್ರೋಶ ವ್ಯಕ್ತಪಡಿಸಿ ದರು.

ಗಲಾಟೆ ಹತ್ತಿಕ್ಕಲು ಸದನಸವನ್ನು ಮುಂದೂಡಿದರು. ನಂತರವೂ ಇದೇ ಪರಿಸ್ಥಿತಿ ಇದ್ದ ಕಾರಣ ಸ್ಪೀಕರ್ ತಮ್ಮಿನೇನಿ 15 ಟಿಡಿಪಿ ಸದಸ್ಯರನ್ನು ಅಮಾನತು ಗೊಳಿಸಿದರು.