Wednesday, 11th December 2024

ತರಬೇತಿ ವಿಮಾನವು ತೆಲಂಗಾಣದಲ್ಲಿ ಪತನ: ಪೈಲಟುಗಳ ಸಾವು

ಹೈದರಾಬಾದ್: ಭಾರತೀಯ ವಾಯುಪಡೆಯ ತರಬೇತಿ ವಿಮಾನವು ತೆಲಂಗಾಣದಲ್ಲಿ ಪತನವಾಗಿದ್ದು ವಿಮಾನದಲ್ಲಿದ್ದ ಪೈಲಟ್ ಗಳು ಮೃತಪಟ್ಟಿದ್ದಾರೆ.
ತೆಲಂಗಾಣದ ತೂಪ್ರಾನ್ನ ರಾವೆಲ್ಲಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಬೆಳಗ್ಗೆ Pilatus ವಿಮಾನ ಪತನಗೊಂಡಿದೆ. ದುರಂತದ ವೇಳೆ ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಕ್ಷಣಕ್ಕೆ ಖಚಿತವಾಗಿಲ್ಲ. ಅಪಘಾತದ ನಂತರ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ವಿಮಾನವು ಸುಟ್ಟು ಬೂದಿಯಾಗಿದೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಐಎಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪೈಲಟ್ ಗಳು ಸಾವನ್ನಪ್ಪಿದ್ದಾರೆ. ಪೈಲಟುಗಳಲ್ಲಿ ಒಬ್ಬ ಬೋಧಕ ಮತ್ತು ಒಬ್ಬ ಕೆಡೆಟ್ ಇದ್ದಾರೆ ಎಂದು ಹೇಳಲಾಗಿದೆ.