Friday, 13th December 2024

ಇಂದಿನಿಂದ ಬಾಂಬೆ ಹೈಕೋರ್ಟ್​ ಟೆಲಿಗ್ರಾಂ ಚಾನಲ್​ ಆರಂಭ

ಮುಂಬೈ: ಸಾಮಾಜಿಕ ಜಾಲತಾಣ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಬಾಂಬೆ ಹೈ ಕೋರ್ಟ್​ ಮುಂದಾಗಿದೆ.

ಇಂದಿನಿಂದ ಬಾಂಬೆ ಹೈಕೋರ್ಟ್​ ಟೆಲಿಗ್ರಾಂ ಚಾನಲ್​ ಆರಂಭಿಸಿದೆ. ಈ ಮೂಲಕ ಸರಳ ಮತ್ತು ಸುಲಭವಾಗಿ ಅರ್ಜಿಗಳ ಕುರಿತು ತಿಳಿಯಲು ಸಹಾಯ ಆಗಲಿದೆ. ಈ ಚಾನಲ್​ ಮೂಲಕ ಪ್ರಕರಣಗಳ ಮಾಹಿತಿ ವಾದಿ ಮತ್ತು ಪ್ರತಿವಾದಿಗಳಿಗೆ ಲಭ್ಯವಾಗಲಿದ್ದು, ಇದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ.

ಬಾಂಬೆ ಹೈಕೋರ್ಟ್​ ವೆಬ್​ಸೈಟ್​ ಮೂಲಕ ಇದೀಗ ನ್ಯಾಯಾಲಯದ ಪ್ರಕರಣಗಳ ಕುರಿತು ಮಾಹಿತಿ ಸಿಗಲಿದೆ. ಇಲ್ಲಿ ವಾದಿಗಳು ಮತ್ತು ಪ್ರತಿವಾದಿಗಳು ತಮ್ಮ ಕೇಸ್​ ಅನ್ನು ನ್ಯಾಯಾಲಯ ಇಂದು ಕೈಗೊಳ್ಳಲಿದೆಯಾ ಅಥವಾ ನಾಳೆ ಕೈಗೊಳ್ಳಲಿದೆಯಾ ಎಂಬ ಮಾಹಿತಿಯನ್ನು ಪಡೆಯುತ್ತಿದ್ದರು. ವೆಬ್​​ಸೈಟ್​​ನಲ್ಲಿ ಈ ಕುರಿತು ಮಾಹಿತಿ ಪಡೆಯುವುದು ಸಾಮಾನ್ಯ ಜನರಿಗೆ ಮತ್ತು ಸದಸ್ಯೇತರರಿಗೆ ಕಷ್ಟವಾಗಿತ್ತು. ಇದು ವಕೀಲರಿಗೆ ಮತ್ತು ಇದರ ಬಗ್ಗೆ ಮಾಹಿತಿ ಇದ್ದವರಿಗೆ ಮಾತ್ರ ಸುಲಭವಾಗಿ ಸಿಗುತ್ತಿತ್ತು.

ಬಾಂಬೆ ಹೈಕೋರ್ಟ್​​​ ಇದೀಗ ತಮ್ಮದೇ ಅಧಿಕೃತ ಟೆಲಿಗ್ರಾಂ ಚಾನಲ್​ ಅನ್ನು ನ.9 ರಿಂದ ಆರಂಭಿಸಿದೆ.

ಟೆಲಿಗ್ರಾಂ ಚಾನಲ್​ನಲ್ಲಿ ಸಲಭವಾಗಿ 2.5 ಎಂಬಿಯ ಪಿಡಿಎಫ್​​ ಫೈಲ್​ ಅಥವಾ ವರ್ಡ್​​ ಫೈನ್​ ಅನ್ನು ಕಳುಹಿಸಬಹುದಾಗಿದೆ. ಡೌನ್​ಲೋಡ್​ ಮಾಡುವುದು ಕೂಡ ಸುಲಭವಾಗಿದೆ.

ಹೈಕೋರ್ಟ್​ ವೆಬ್​ಸೈಟ್​ನಲ್ಲಿ ವಕೀಲರು ಹೊರತಾಗಿ ಸಾಮಾನ್ಯ ಜನರು ಮಾಹಿತಿಗಳನ್ನು ಹುಡುಕುವುದು ಮತ್ತು ಓದುವುದು ಕಷ್ಟ ಸಾಧ್ಯ. ಪ್ರಕರಣ ಸಂಬಂಧ ವಾದಿಗಳು ಮತ್ತು ಪ್ರತಿವಾದಿಗಳು ಇದೀಗ ಟೆಲಿಗ್ರಾಂ ಮೂಲಕ ಸಾಮಾನ್ಯ ಸಾರ್ವನಿಕ ಪ್ರಕರಣದ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದಾಗಿದೆ ಎಂದು ಹೈಕೋರ್ಟ್​ ವಕೀಲ ವಿನೋದ್​ ಸತ್ಪುಟ್ ಹೇಳಿದ್ದಾರೆ.