Saturday, 14th December 2024

ಮ್ಯೂಚುವಲ್ ಫಂಡ್ ಗಳತ್ತ ಒಲವು, ಸೆಪ್ಟೆಂಬರ್’ನಲ್ಲಿ 10,000 ಕೋಟಿ ರೂ. ಹೂಡಿಕೆ

ನವದೆಹಲಿ: ಹೂಡಿಕೆ ಮಾರುಕಟ್ಟೆಯಲ್ಲಿ ಚಿಲ್ಲರೆ ಹೂಡಿಕೆದಾರರಲ್ಲಿ ಹೆಚ್ಚಿನ ಮಂದಿ ಮ್ಯೂಚುವಲ್ ಫಂಡ್ ಗಳತ್ತ ಹೆಚ್ಚಿನ ಒಲವು ತೋರುತ್ತಿರುವುದು ಲೇಟೆಸ್ಟ್ ಸುದ್ದಿ.

ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾದ ವರದಿಯಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಎಸ್ ಐ ಪಿ ಮೂಲಕ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆಯಾಗಿರುವ ಹಣ 10,000 ಕೋಟಿ ರೂ. ದಾಟಿದೆ ಎಂದು ಹೇಳಲಾಗಿದೆ. ತಿಂಗಳ ಎಸ್.ಐ.ಪಿ ಸಂಗ್ರಹ 10,351 ಕೋಟಿ ರೂ. ದಾಖಲಾಗಿದ್ದು, 10,000 ಕೋಟಿ ದಾಟಿದ್ದು ಇದೇ ಮೊದಲು ಎನ್ನಲಾಗಿದೆ.

ಸೆಪ್ಟೆಂಬರ್ ತಿಂಗಳೊಂದರಲ್ಲೇ 26.80 ಲಕ್ಷ ಮಂದಿ ಎಸ್ ಐ ಪಿ ಹೂಡಿಕೆಗಾಗಿ ಹೆಸರು ನೊಂದಾಯಿಸಿದ್ದಾರೆ. ಹೆಚ್ಚಿನ ಬ್ಯಾಂಕ್ ಗ್ರಾಹಕರು ಸಾಂಪ್ರದಾ ಯಿಕ ಹೂಡಿಕೆ ವಿಧಾನಗಳಾದ ಎಫ್.ಡಿ, ಚಿನ್ನ, ರಿಯಲ್ ಎಸ್ಟೇಟ್ ಗಳಿಗಿಂತ ಹೆಚ್ಚಾಗಿ ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಲು ಬಯಸುತ್ತಿದ್ದಾರೆ.