Saturday, 14th December 2024

ಮೇ 2024 ರವರೆಗೆ ಥೈಲ್ಯಾಂಡ್’ಗೆ ವೀಸಾರಹಿತ ಪ್ರವೇಶ

ವದೆಹಲಿ : ಮುಂದಿನ ತಿಂಗಳಿನಿಂದ ಭಾರತೀಯ ಪ್ರಯಾಣಿಕರಿಗೆ ಥೈಲ್ಯಾಂಡ್ ಪ್ರವಾಸೋದ್ಯಮ ಮಂಡಳಿಯು ಯಾವುದೇ ರೀತಿಯ ವೀಸಾ ಅವಶ್ಯಕತೆ ಗಳನ್ನ ಅಧಿಕೃತವಾಗಿ ರದ್ದುಗೊಳಿಸಿದೆ. ಈ ಪ್ರಕ್ರಿಯೆಯು ಮೇ 2024 ರವರೆಗೆ ಅನ್ವಯಿಸುತ್ತದೆ.

“ಮುಂದಿನ ತಿಂಗಳಿನಿಂದ ಮೇ 2024ರವರೆಗೆ ಭಾರತ ಮತ್ತು ತೈವಾನ್’ನಿಂದ ಆಗಮಿಸುವವರಿಗೆ ಥೈಲ್ಯಾಂಡ್ ವೀಸಾ ಅವಶ್ಯಕತೆಗಳನ್ನ ಮನ್ನಾ ಮಾಡುತ್ತದೆ” ಎಂದು ಸರ್ಕಾರಿ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.

ವಕ್ತಾರ ಚಾಯ್ ವಚರೊಂಕೆ, “ಭಾರತ ಮತ್ತು ತೈವಾನ್ ನಿಂದ ಆಗಮಿಸುವವರು 30 ದಿನಗಳವರೆಗೆ ಥೈಲ್ಯಾಂಡ್’ಗೆ ಪ್ರವೇಶಿಸಬಹುದು” ಎಂದು ತಿಳಿಸಿದರು.

ಈ ಹಿಂದೆ, ಥೈಲ್ಯಾಂಡ್ ಎಲ್ಲಾ ಪ್ರವಾಸಿಗರಿಗೆ ವೀಸಾ-ಆನ್-ಅರೈವಲ್’ನ್ನ ಒದಗಿಸಿತು ಮತ್ತು ಸಾವಿರಾರು ಜನರು ಹೇಳಿದಂತೆ ಪ್ರಕ್ರಿಯೆಯು ಸುಲಭ ಮತ್ತು ತೊಂದರೆ ಮುಕ್ತವಾಗಿತ್ತು.