Friday, 13th December 2024

ಭಾರತ್ ಜೋಡೋ ಯಾತ್ರೆ: ತೆಲಂಗಾಣದಲ್ಲಿ ಮೂರನೇ ದಿನ

ಹೈದ್ರಾಬಾದ್: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ತೆಲಂಗಾಣದಲ್ಲಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಾರಾಯಣಪೇಟೆ ಜಿಲ್ಲೆಯ ಏಳಿಗಂದಲದಿಂದ ಆರಂಭ ವಾಯಿತು.
ಮೆಹಬೂಬ ನಗರದಲ್ಲಿ ರಾತ್ರಿ ಯಾತ್ರೆಗೆ ವಿರಾಮ ನೀಡಲಾಗುತ್ತದೆ. ಬೆಳಗ್ಗೆ 6-10ರ ಸುಮಾರಿನಲ್ಲಿ ಆರಂಭವಾದ ಯಾತ್ರೆಯಲ್ಲಿ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ.ವೇಣುಗೋಪಾಲ್, ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ್ ರೆಡ್ಡಿ ಮತ್ತು ನೂರಾರು ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು.