Wednesday, 11th December 2024

‘ಬಾಂಬ್ ಬೆದರಿಕೆ’ ಹಿನ್ನೆಲೆ: ಹೈ ಅಲರ್ಟ್‌

ಕೋಲ್ಕತ್ತಾ: ಕೋಲ್ಕತ್ತಾ-ಬೆಂಗಳೂರು ನಡುವೆ ಹಾರಾಟದಲ್ಲಿದ್ದ ಇಂಡಿಗೋ ವಿಮಾನ ‘ಬಾಂಬ್ ಬೆದರಿಕೆ’ ಹಿನ್ನೆಲೆಯಲ್ಲಿ ಕೆಲಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.

ಕೋಲ್ಕತ್ತಾದ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 5.29ಕ್ಕೆ ಹೊರಟಿದ್ದ 6E379 ವಿಮಾನವು ಬೆಳಗ್ಗೆ 8.01ಕ್ಕೆ ಬೆಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ವಿಮಾನಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಮಾಹಿತಿ ಬಂದಿತ್ತು.

ತಕ್ಷಣವೇ ಅಲಟ್೯ ಆದ ಭದ್ರತಾ ಪಡೆಗಳು ತಪಾಸಣೆಗೆ ಕೈಗೊಂಡಿದ್ದು, ಬಾಂಬ್ ನಿಷ್ಕ್ರಿಯ ದಳವನ್ನೂ ಸ್ಥಳಕ್ಕೆ ಕರೆಯಿಸಿಕೊಳ್ಳಲಾಗಿತ್ತು. ತಪಾಸಣೆ ವೇಳೆ 6ಡಿ ಸೀಟ್ ನಲ್ಲಿ ಬಾಂಬ್ ಎಂದು ಟಿಶ್ಯೂನಲ್ಲಿ‌ ನೀಲಿ ಶಾಯಿಯಲ್ಲಿ ಬರೆದಿದ್ದು ಪತ್ತೆಯಾಗಿದೆ.

ತೀವ್ರ ಶೋಧದ ಬಳಿಕ ಇದೊಂದು ಹುಸಿ ಬೆದರಿಕೆ ಎಂದು ಗೊತ್ತಾಗಿದೆ.