Wednesday, 11th December 2024

ಬಿಷ್ಣೋಯಿ ಗ್ಯಾಂಗ್‌ನಿಂದ ಸಲ್ಮಾನ್ ಹತ್ಯೆಗೆ ಸಂಚು ನಡೆದಿತ್ತು..!

ವದೆಹಲಿ: ಜೈಲು ಪಾಲಾಗಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿ ಸೂಚನೆ ಮೇರೆಗೆ ನಟ ಸಲ್ಮಾನ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಪಂಜಾಬ್‌ ಡಿಜಿಪಿ ಮಾಹಿತಿ ನೀಡಿದ್ದಾರೆ.

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಹೊಣೆಯನ್ನು ಇದೇ ಬಿಷ್ಣೋಯಿ ಗ್ಯಾಂಗ್‌ ಹೊತ್ತುಕೊಂಡಿದೆ.

ಮೂಸೆವಾಲಾ ಕೊಲೆ ಆರೋಪಿ ಕಪಿಲ್ ಪಂಡಿತ್‌ನ ಪ್ರಾಥಮಿಕ ತನಿಖೆಯಲ್ಲಿ ಈ ಸ್ಟೋಟಕ ಮಾಹಿತಿ ಬಹಿರಂಗಗೊಂಡಿದೆ. ಸಲ್ಮಾನ್ ಖಾನ್ ಹತ್ಯೆ ನಡೆಸಲು ಬಿಷ್ಣೋಯಿ ಗ್ಯಾಂಗ್ ನನ್ನನ್ನು ಸಂಪರ್ಕಿಸಿತ್ತು ಎಂದು ಕಪಿಲ್‌ ಪಂಡಿತ್‌ ಹೇಳಿಕೆ ನೀಡಿದ್ದಾನೆ ಎಂದು ಡಿಜಿಪಿ ತಿಳಿಸಿದ್ದಾರೆ.

ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೂಸೆವಾಲಾ ಕೊಲೆಯಾದ ಕೆಲವು ದಿನಗಳ ನಂತರ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಬಂದಿತ್ತು.

ಬಿಷ್ಣೋಯಿಗಳಿಗೆ ಕೃಷ್ಣ ಮೃಗ ಅತ್ಯಂತ ಪ್ರಿಯ ಮತ್ತು ಪವಿತ್ರವಾಗಿದ್ದು, ಅದನ್ನು ಹತ್ಯೆ ಮಾಡಿರುವ ಸಲ್ಮಾನ್ ಖಾನ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು ಎನ್ನುವ ಸಂಗತಿ ಬಹಿರಂಗವಾಗುತ್ತಲೇ, ಸಲ್ಮಾನ್‌ಗೆ ಭದ್ರತೆ ಹೆಚ್ಚಿಸಲಾಗಿತ್ತು.