Saturday, 14th December 2024

ಅಶಿಸ್ತಿನ ವರ್ತನೆ: ಪಕ್ಷೇತರ ಸಂಸದ ಸೇರಿ ಮೂವರ ಅಮಾನತು

ನವದೆಹಲಿ:  ‘ಅಶಿಸ್ತಿನ ವರ್ತನೆ’ ತೋರಿದ್ದಕ್ಕಾಗಿ ಪಕ್ಷೇತರ ಸಂಸದ ಅಜಿತ್‌ ಕುಮಾರ್‌ ಭುಯಾನ್‌ ಸೇರಿ ಆಮ್ ಆದ್ಮಿ ಪಕ್ಷದ ಸುಶೀಲ್‌ ಕುಮಾರ್‌ ಗುಪ್ತಾ ಹಾಗೂ ಸಂದೀಪ್‌ ಕುಮಾರ್‌ ಪಾಠಕ್‌ ರನ್ನು ವಾರದ ಕಲಾಪದ ಉಳಿದಿರುವ ಅವಧಿಗೆ ಅಮಾನತುಗೊಳಿಸಲಾಗಿದೆ.

ತೀವ್ರ ಗದ್ದಲದ ನಡುವೆ ಮೊದಲ ಬಾರಿಗೆ ಸದನ ಮುಂದೂಡಿದ ನಂತರವೂ, ಪ್ರತಿಪಕ್ಷ ಸದಸ್ಯರು ಸದನದ ಬಾವಿಯಲ್ಲಿ ತಮ್ಮ ಪ್ರತಿಭಟನೆ ಮುಂದುವರೆಸಿ ದರು. ಫಲಕಗಳನ್ನು ಹಿಡಿದುಕೊಂಡು ಸದನದ ಬಾವಿಯಲ್ಲಿ ಘೋಷಣೆ ಗಳನ್ನು ಕೂಗಿದ್ದಕ್ಕಾಗಿ ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ಅವರು ಮೂವರು ಸದಸ್ಯರನ್ನು ಹೆಸರಿಸಿದರು.

ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅವರು, ಮೂವರು ಸದಸ್ಯರನ್ನು ಸದನದಿಂದ ಅಮಾನತು ಗೊಳಿಸುವ ಪ್ರಸ್ತಾಪವನ್ನು ಮಂಡಿಸಿದರು.

‘ಅಶಿಸ್ತಿನ ನಡವಳಿಕೆಗಾಗಿ’ಗಾಗಿ ಇದುವರೆಗೆ 23 ವಿಪಕ್ಷ ಸದಸ್ಯರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.