Saturday, 14th December 2024

ಸೀಮಿತ ಆವೃತ್ತಿಯ ಮಾವಿನ ಸ್ವಾದ ಅನಾವರಣಗೊಳಿಸಿದ ಟಿಕ್ ಟ್ಯಾಕ್(Tic Tac): ಹಣ್ಣುಗಳ ರಾಜನಿಗೆ ಶ್ರದ್ಧಾಂಜಲಿ

ಭಾರತೀಯ ಮಾವಿನ ಋತುವಿನ ಅಲೆಯಮೇಲೆ ಸವಾರಿ ಮಾಡಲು ಮಾವಿನ ಸ್ವಾದದ ಟಿಕ್ ಟ್ಯಾಕ್ 

ಬೇಸಿಗೆಯ ಚೈತನ್ಯವನ್ನು ಸವಿಯಲು ಬಯಸಿತ್ತಿದ್ದೀರಾ? ಹಾಗಾದರೆ, ಸಿಹಿ-ಪ್ಯಾಕೇಜ್ಡ್ ಉತ್ಪನ್ನಗಳ ವಿಶ್ವದ ಮುಂಚೂಣಿಉತ್ಪಾದಕ ಸಂಸ್ಥೆಯಾದ ಫೆರೆರೊ ಇಂಡಿಯಾ(ಫೆರೆರೋ ಗ್ರೂಪ್‌ನ ಭಾಗ)ದ ಕನ್ಫೆಕ್ಷನರಿ ಬ್ರ್ಯಾಂಡ್ ಆದ ಟಿಕ್ ಟ್ಯಾಕ್, ನಿಮಗಾಗಿ ಅತ್ಯಂತ ನಿಖರವಾದ ಬೇಸಿಗೆ ಅಚ್ಚರಿಯನ್ನು ಹೊಂದಿದೆ. ಬ್ರ್ಯಾಂಡ್, ಸೀಮಿತ-ಆವೃತ್ತಿಯ ಮಾವಿನ ಸ್ವಾದದ ಟಿಕ್ ಟ್ಯಾಕ್ ಪರಿಚಯಿಸಿದ್ದು, ಇದು ಭಾರತದಲ್ಲಿ ವಿವಿಧ ನಗರ ಮಾರುಕಟ್ಟೆಗಳಾದ್ಯಂತ ಲಭ್ಯವಿರುತ್ತದೆ.

ಹಣ್ಣುಗಳ ರಾಜನಾದ ಮಾವಿನ ಆಗಮನಕ್ಕಾಗಿ ಭಾರತೀಯರು ಬೇಸಿಗೆ ಋತುವನ್ನು ಎದುರು ನೋಡುತ್ತಿರುತ್ತಾರೆ ಮತ್ತು ಮಾವು ನಮ್ಮ ದೇಶದ ಸಂಸ್ಕೃತಿಯ ಅತಿ ಸೂಕ್ಷ್ಮ ಭಾಗವಾಗಿದೆ. ಕಳಿತ ಮಾವಿನ ರಸಭರಿತ ಸ್ವಾದ ಯಾವಾಗಲೂ ಹಬ್ಬವೇ, ಮತ್ತು ಈ ಹೊಸ ಟಿಕ್ ಟ್ಯಾಕ್ ಸ್ವಾದದ ಪರಿಚಯ ವು, ಮಾವಿನ ಹಣ್ಣಿನ ಸಮೃದ್ಧ, ರಸಮಯ ರುಚಿಯನ್ನು ಒಂದು ಸುಲಭವಾದ, ಎತ್ತಿಕೊಂಡೊಯ್ಯಬಹುದಾದ ಪ್ಯಾಕ್‌ನಲ್ಲಿ ಅನುಭವಿಸಲು ಬಯಸುತ್ತಿರುವ ಮತ್ತು ಹಣ್ಣನ್ನು ಪ್ರೇಮಿಸುವ ಎಲ್ಲಾ ಗ್ರಾಹಕರಿಗಾಗಿ ಇದು ಹೆಚ್ಚಿನ ತೃಪ್ತಿ ನೀಡುತ್ತದೆ. ಟಿಕ್ ಟ್ಯಾಕ್ ಪೋರ್ಟ್‌ಫೋಲಿಯೋದಲ್ಲಿರುವ ಇತರ ಮಿಂಟ್‌ಗಳಲ್ಲಂತಲ್ಲದೆ, ಈ ಹೊಸ ವೈವಿಧ್ಯವು ಗ್ರಾಹಕರ ಜಿಹ್ವೆಗೆ, ಕೇವಲ ಸ್ವಾದದಲ್ಲಿ ಮಾತ್ರವಲ್ಲದೆ ಪ್ಯಾಕೇಜಿಂಗ್ ಬಣ್ಣಗಳಲ್ಲೂ, ಅಂದರೆ ಹೊಳೆಯುವ ಹಳದಿ, ತಾಜಾ ಮಿಂಟ್‌ನಲ್ಲೂ ನಿಜವಾದ ಮಾವಿನ ರುಚಿಯನ್ನು ಒದಗಿಸಲಿದೆ.

ಟಿಕ್ ಟ್ಯಾಕ್‌ನ ಗ್ರಾಹಕ ಇಚ್ಛೆಯ ಕುರಿತಾದ ಅಧ್ಯಯನವು, ಭಾರತೀಯ ಕನ್ಫೆಕ್ಷನರಿ ಪ್ರೇಮಿಗಳಿಗೆ ಮಾವು ಅತಿನೆಚ್ಚಿನ ಸ್ವಾದಗಳ ಪೈಕಿ ಒಂದೆಂದು ಗುರುತಿಸಿತ್ತು. ಈ ಹೊಸ ಮಾವಿನ ಟಿಕ್ ಟ್ಯಾಕ್, ತಾನು ಮಾಡುವ ಪ್ರತಿಯೊಂದರಲ್ಲೂ, ಗ್ರಾಹಕರನ್ನೇ ಹೃದ್ಭಾಗದಲ್ಲಿರಿಸಿಕೊಳ್ಳುವ ಬ್ರ್ಯಾಂಡ್‌ನ ಬದ್ಧತೆಗೆ ನಿಖರವಾಗಿ ಹೊಂದಿಕೊಂಡು, ಅವರುಗಳ ಇಚ್ಛೆಗಳು ಹಾಗೂ ಬೇಡಿಕೆಗಳು ತನ್ನ ಉತ್ಪನ್ನ ಆವಿಷ್ಕಾರಗಳಲ್ಲಿ ನಿಖರವಾಗಿ ರೂಪುಗೊಳ್ಳುವುದನ್ನು ಖಾತರಿಪಡಿಸುತ್ತದೆ.

ಫೆರೆರೊ ಇಂಡಿಯಾದ ಮಾರ್ಕೆಟಿಂಗ್ ಮುಖ್ಯಸ್ಥ(ಪಿಲ್ಸ್ ಅಂಡ್ ಗಮ್ಸ್) ಶ್ರೀ ಝೋಹರ್ ಕಾಪುಸ್ವಾಲಾ, “ಫೆರೆರೊ ಇಂಡಿಯಾದಲ್ಲಿ ನಮ್ಮ ಎಲ್ಲಾ ಉತ್ಪನ್ನ ಆವಿಷ್ಕಾರಗಳೂ, ಸ್ಥಳೀಯ ಗ್ರಾಹಕರು ಏನನ್ನು ನಿರೀಕ್ಷಿಸುತ್ತಿದ್ದಾರೋ ಅದಕ್ಕಿಂತ ಉತ್ತಮವಾದ ಉತ್ಪನ್ನಗಳನ್ನು ಪೂರೈಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ಋತುವಿನ ಉಷ್ಣವಲಯದ ಸ್ವಾದವನ್ನು ಒದಗಿಸುವ ಮೂಲಕ ಟಿಕ್ ಟ್ಯಾಕ್, ಭಾರತದಲ್ಲಿ ಬೇಸಿಗೆ ಋತುವನ್ನು ಆಚರಿಸಲು ಬಯಸುತ್ತದೆ ಮಾತ್ರವಲ್ಲದೆ, ತನ್ನ ಗ್ರಾಹಕರು ಅತ್ಯಂತ ನಿಖರವಾದ ಮಾವುಭರಿತ ತಾಜಾತನವನ್ನು ಅನುಭವಿಸಲು ಒಂದು ಅವಕಾಶವನ್ನೂ ನೀಡ ಬಯಸುತ್ತದೆ.” ಎಂದು ಹೇಳಿದರು.

ಭಾರತದಾದ್ಯಂತ ಇರುವ ನಗರ ಮಾರುಕಟ್ಟೆಗಳಲ್ಲಿ ಇರುವ ಕಪಾಟುಗಳನ್ನು ವಿಶೇಷವಾಗಿ ತಲುಪಲಿರುವ ಈ ಹೊಸ ಮಾವಿನ ಟಿಕ್ ಟ್ಯಾಕ್ (ಮ್ಯಾಂಗೋ ಟಿಕ್ ಟ್ಯಾಕ್), ಎರಡು ಪ್ಯಾಕ್‌ಗಳಲ್ಲಿ ಬರುತ್ತಿದ್ದು ಇವುಗಳ ಬೆಲೆ ಕ್ರಮವಾಗಿ ರೂ. 15(9.7 ಗ್ರಾಂ) ಮತ್ತು ರೂ. 20(13 ಗ್ರಾಂ) ಆಗಿರುತ್ತದೆ. ಈ ಪರಿಚಯವು ಬ್ರ್ಯಾಂಡ್‌ಗಾಗಿ ಇನ್ನೂ ಹೆಚ್ಚಿನ ಬೆಳವಣಿಗೆಯನ್ನು ಪ್ರೋತ್ಸಾಹಿಸಿ ಭಾರತೀಯ ಕನ್ಫೆಕ್ಷನರಿ ಮಾರುಕಟ್ಟೆಯಲ್ಲಿ ಇರುವ ಮುಂಚೂಣಿ ಸಂಸ್ಥೆಗಳ ಪೈಕಿ ಒಂದಾಗಿ ಟಿಕ್ ಟ್ಯಾಕ್‌ನ ಸ್ಥಾನವನ್ನು ಗಟ್ಟಿಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಆಲೋಚಿಸಿ ಮಾವು! ಆಲೋಚಿಸಿ ಟಿಕ್ ಟ್ಯಾಕ್ !