Sunday, 6th October 2024

ಚೆನ್ನೈನಲ್ಲಿ ಶಾ ಆಗಮನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ

ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತಮಿಳುನಾಡಿಗೆ ಭೇಟಿ ನೀಡಿ, ಎರಡು ದಿನಗಳ ಕಾಲ ವಾಸ್ತವ್ಯ ಹೂಡಲಿ ದ್ದಾರೆ.

ಮಧ್ಯಾಹ್ನ 1;40ಕ್ಕೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಶಾ ಭೇಟಿ ಹಿನ್ನೆಲೆ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಮತ್ತು ಇತರ ಸಚಿವರು ಸೇರಿದಂತೆ ಬಿಜೆಪಿ ಮುಖಂಡರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಮಿತ್ ಶಾ ಅವರನ್ನು ಸ್ವಾಗತಿಸಲಿದ್ದಾರೆ. ಚೆನ್ನೈ ತಲುಪಿದ ನಂತರ ಶಾ, ಎಂಆರ್‌ಸಿ ನಗರದ ಖಾಸಗಿ ಸ್ಟಾರ್ ಹೋಟೆಲ್​​ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

ನಂತರ ಸಂಜೆ ಚೆನ್ನೈನ ಕಲೈನಾರ್ ಅರಂಗಂನಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತಿರುವಳ್ಳೂರು ಜಿಲ್ಲೆಯ ಥರ್ವೊಯ್-ಕಂಡಿಗೈ ಜಲಾಶಯ ಯೋಜನೆ ಮತ್ತು ಮೆಟ್ರೋ ರೂಲಿನ ವಿಸ್ತರಣೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.