Sunday, 6th October 2024

ಸೇವೆಗೆ ಸಿಗದ ಅವಕಾಶ: ಭಕ್ತರಿಗೆ 50 ಲಕ್ಷ ರೂ. ಪರಿಹಾರ ನೀಡಲು ಆದೇಶ

ತಿರುಪತಿ: ಸೇಲಂ ಜಿಲ್ಲಾ ಗ್ರಾಹಕ ನ್ಯಾಯಾಲಯ ಭಕ್ತರೊಬ್ಬರಿಗೆ ಒಂದು ವರ್ಷದ ಒಳಗಾಗಿ 50 ಲಕ್ಷ ರೂ. ಪರಿಹಾರ ನೀಡುವಂತೆ ತಿರುಪತಿ ವೆಂಕಟೇಶ್ವರ ದೇಗುಲದ ಆಡಳಿತ ಮಂಡಳಿ, ತಿರುಪತಿ ತಿರುಮಲ ದೇವಸ್ಥಾನಮ್ಸ್‌ (ಟಿಟಿಡಿ)ಗೆ ಆದೇಶ ನೀಡಿದೆ.

ಇಲ್ಲವೇ, ಸೇವೆ ಮಾಡಿಸಲು ಅವಕಾಶ ಮಾಡಿಕೊಡಬೇಕು ಎಂದು ಆದೇಶ ನೀಡಿದೆ. ಜತೆಗೆ 2006ರಲ್ಲಿ ನೀಡಿದ್ದ 12,250 ರೂ. ಮೊತ್ತಕ್ಕೆ ಪ್ರತಿ ವರ್ಷಕ್ಕೆ ಶೇ.24ರ ಬಡ್ಡಿಯನ್ನೂ ಸೇರಿಸಿ ನೀಡಬೇಕು ಎಂದು ಆದೇಶಿಸಿದೆ.

2006ರಲ್ಲಿ ತಮಿಳುನಾಡಿನ ಸೇಲಂನ ಕೆ.ಆರ್‌.ಹರಿಭಾಸ್ಕರ್‌ ಎಂಬವರು “ವಸ್ತ್ರಾಲಂಕಾರ ಸೇವೆ’ ಮಾಡಿಸುವ ನಿಟ್ಟಿನಲ್ಲಿ 12,250 ರೂ. ಪಾವತಿ ಮಾಡಿ ಕಾಯ್ದಿರಿಸಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಸೇವೆಗೆ ಅವಕಾಶ ನೀಡಲಿಲ್ಲ.

ಒಂದು ವರ್ಷದ ಬಳಿಕ ಸೇವೆಗೆ ಅವಕಾಶ ನೀಡಲು ಕೋರಿದ್ದರೂ ಟಿಟಿಡಿ ಒಪ್ಪಿರಲಿಲ್ಲ. ಹೀಗಾಗಿ, ಅವರು ಸೇಲಂ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.