Saturday, 14th December 2024

ಬಾಂಬ್ ದಾಳಿಯಲ್ಲಿ ಟಿಎಂಸಿ ಪಂಚಾಯತ್ ಮುಖಂಡನ ಸಾವು

ಕೋಲ್ಕತ್ತಾ: ರಾಜ್ಯದ ಇಬ್ಬರು ಕೌನ್ಸಿಲ‍ರ್‌’ಗಳನ್ನು ಗುಂಡಿಕ್ಕಿ ಕೊಂದ ಒಂದು ವಾರದ ನಂತರ, ಬಿರ್ಭೂಮ್ ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ತೃಣಮೂಲ ಕಾಂಗ್ರೆಸ್ ಪಂಚಾಯತ್ ನಾಯಕರೊಬ್ಬರು ಮೃತಪಟ್ಟಿದ್ದಾರೆ.

ಬಿರ್ಭುಮ್ ನ ರಾಂಪುರಹತ್ನಲ್ಲಿ ಟಿಎಂಸಿಯ ಭಾದು ಪ್ರಧಾನ್ ಮೇಲೆ ಅಪರಿ ಚಿತ ದಾಳಿಕೋರರು ಕಚ್ಚಾ ಬಾಂಬ್ ಗಳನ್ನು ಎಸೆದಿದ್ದಾರೆ.

ಮೂಲಗಳ ಪ್ರಕಾರ, ರಾಜ್ಯ ಹೆದ್ದಾರಿ 50 ರ ಬಳಿ ಇದ್ದಾಗ ದುಷ್ಕರ್ಮಿಗಳು ಪ್ರಧಾನ್ ಅವರ ಮೇಲೆ ಕಚ್ಚಾ ಬಾಂಬ್ ಗಳನ್ನು ಎಸೆದರು. ಅವರನ್ನು ರಾಮ್ಪು ರ್ಹತ್ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆ ಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಪಶ್ಚಿಮ ಬಂಗಾಳದಲ್ಲಿ ಇಬ್ಬರು ಕೌನ್ಸಿಲರ್ ಗಳನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದ ವಾರದ ನಂತರ ಈ ಘಟನೆ ನಡೆದಿದೆ. ಕಳೆದ ಭಾನುವಾರ ಸಂಜೆ, ಉತ್ತರ 24 ಪರಗಣದ ಪಾಣಿಹಾಟಿಯಲ್ಲಿ ಟಿಎಂಸಿ ಕೌನ್ಸಿಲರ್ ಒಬ್ಬರನ್ನು ಗುಂಡಿಕ್ಕಿ ಕೊಲ್ಲ ಲಾಯಿತು.