Saturday, 14th December 2024

ಪೆಟ್ರೋಲ್ ದರ ಬೆಂಗಳೂರಿನಲ್ಲಿ ಇಂದು 89.85 ರೂ

ನವದೆಹಲಿ: ತೈಲೋತ್ಪನ್ನಗಳಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.

ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 86.95 ರೂ. ಇದೆ. ಮುಂಬೈನಲ್ಲಿ 93.49 ರೂ, ಜೈಪುರದಲ್ಲಿ 93.75 ರೂ, ಬೆಂಗಳೂರಿನಲ್ಲಿ 89.85 ರೂ, ಹೈದರಾಬಾದ್​ನಲ್ಲಿ 90.42 ರೂ, ತಿರುವನಂತಪುರದಲ್ಲಿ 88.66 ರೂ, ಚೆನ್ನೈನಲ್ಲಿ 89.46 ರೂ, ಕೊಲ್ಕತ್ತಾದಲ್ಲಿ 88.30 ರೂ. ಇದೆ. ಈ ಮೂಲಕ ಪೆಟ್ರೋಲ್ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ.

ಭಾರತದ ಕೆಲವು ನಗರಗಳಲ್ಲಿ ಮಾತ್ರ ಡೀಸೆಲ್ ಬೆಲೆ ಕೊಂಚ ಹೆಚ್ಚಾಗಿದೆ. ಚೆನ್ನೈ, ಮುಂಬೈ, ಹೈದರಾಬಾದ್, ಭುವನೇಶ್ವರದಲ್ಲಿ 1 ಲೀಟರ್ ಡೀಸೆಲ್ ಬೆಲೆ 84 ರೂ. ದಾಟಿದೆ. ನವದೆಹಲಿಯಲ್ಲಿ 1 ಲೀಟರ್ ಡೀಸೆಲ್​ಗೆ 77.13 ರೂ. ಇದೆ. ಚೆನ್ನೈನಲ್ಲಿ 82.39 ರೂ, ಮುಂಬೈನಲ್ಲಿ 83.99 ರೂ, ಬೆಂಗಳೂರಿನಲ್ಲಿ 81.76 ರೂ, ಹೈದರಾಬಾದ್​ನಲ್ಲಿ 84.14 ರೂ. ಇದೆ. ಬಜೆಟ್​ನಲ್ಲಿ ಡೀಸೆಲ್ ಮೇಲೆ 4 ರೂ ಮತ್ತು ಪೆಟ್ರೋಲ್ ಮೇಲೆ 2.5 ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ವಿಧಿಸಲಾಗಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ಹೇರಿದರೂ ಸಹ ಇತರೆ ತೆರಿಗೆ ಮತ್ತು ಸೆಸ್ ಅನ್ನು ಪರಿಷ್ಕರಿಸಿರುವುದರಿಂದ ಗ್ರಾಹಕರ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ ಎಂದು ಕೇಂದ್ರ ಸರ್ಕಾರ ಖಚಿತಪಡಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಏರಿಕೆ ಆಗದಿದ್ದರೂ ದೇಶೀಯ ಮಾರುಕಟ್ಟೆ ಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ.