Friday, 13th December 2024

Topless Women Protest: ಪ್ಯಾರಿಸ್‍ನಲ್ಲಿ ಮಹಿಳೆಯರ ‘ಟಾಪ್‌ಲೆಸ್‌’ ಪ್ರತಿಭಟನೆ; ಕಾರಣವೇನು?

Women Protest in Paris

ಪ್ಯಾರಿಸ್‍: ಪ್ಯಾರಿಸ್‍ನ ಲೌವ್ರೆಯ ವಸ್ತು ಸಂಗ್ರಹಾಲಯದ ಮುಂಭಾಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ಹಕ್ಕುಗಳ ಆಂದೋಲನವಾದ ಫೆಮೆನ್‍ನ ಮಹಿಳಾ(Topless Women Protest) ಕಾರ್ಯಕರ್ತರು ಮಹಿಳೆಯರ ವಿರುದ್ಧದ ಹಿಂಸಾಚಾರದ ನಿರ್ಮೂಲನೆಗಾಗಿ ಟಾಪ್‍ಲೆಸ್ ಆಗಿ ಎದೆಯ ಭಾಗದಲ್ಲಿ ಫೋಷಣೆ ಬರೆದು ಪ್ರತಿಭಟನೆ ಮಾಡಿದ್ದಾರೆ. ಕಾರ್ಯಕರ್ತರು ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ.

ಪ್ರತಿಭಟನೆಯಲ್ಲಿ ವಿವಿಧ ವಯಸ್ಸಿನ 100 ಮಂದಿ ಮಹಿಳೆಯರು ಟಾಪ್‍ಲೆಸ್ ಆಗಿ ಭಾಗವಹಿಸಿದ್ದರು. “ಮಹಿಳೆಯರ ವಿರುದ್ಧ ದೌರ್ಜನ್ಯ ನಿಲ್ಲಿಸಿ” ಮತ್ತು “ಜಿನ್, ಜಿಯಾನ್, ಆಜಾದಿ” ನಂತಹ ಸ್ತ್ರೀವಾದಿ ಘೋಷಣೆಗಳನ್ನು ಅವರ ದೇಹದ ಮೇಲೆ ಫ್ರೆಂಚ್, ಇಂಗ್ಲಿಷ್ ಮತ್ತು ಕುರ್ದಿಶ್ ಭಾಷೆಗಳಲ್ಲಿ ಬರೆದುಕೊಂಡಿದ್ದಾರೆ. ವಿಶ್ವಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಬೇಕೆಂದು ಈ ಪ್ರತಿಭಟನೆ ಕರೆ ನೀಡಿದೆ.

ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ, ಫೆಮೆನ್ ಈ ಪ್ರತಿಭಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, “ರಾಜಕೀಯ ದಂಗೆಯ ಈ ಕೃತ್ಯದಲ್ಲಿ, #FEMEN ಗಣ್ಯ ಸಾಂಸ್ಕೃತಿಕ ಶಕ್ತಿಯ ಸ್ಮಾರಕವಾದ ಲೌವ್ರೆಯ ಮುಂಭಾಗವನ್ನು ಕ್ರಾಂತಿಕಾರಿ ಪ್ರತಿರೋಧದ ಸ್ಥಳವಾಗಿ ಮಾಡಿಕೊಂಡಿದ್ದು,  ಅಫ್ಘಾನಿಸ್ತಾನ, ಇರಾನ್, ಇರಾಕ್, ಕುರ್ದಿಸ್ತಾನ್, ಉಕ್ರೇನ್, ಪ್ಯಾಲೆಸ್ಟೈನ್, ಇಸ್ರೇಲ್, ಸುಡಾನ್, ಲಿಬಿಯಾದಲ್ಲಿ ತುಳಿತಕ್ಕೊಳಗಾದ ಹುಡುಗಿಯರು ಮತ್ತು ಮಹಿಳೆಯರೊಂದಿಗೆ ನಾವು ನಿಲ್ಲುತ್ತೇವೆ” ಎಂದು ತಿಳಿಸಿದೆ.

ಗಾಯಕ ಲಿಯೋ ನೇತೃತ್ವದಲ್ಲಿ, ಕಾರ್ಯಕರ್ತರು ಕಪ್ಪು ಪರದೆಗಳನ್ನು ಧರಿಸಿ “ಎಲ್’ಸ್ತೋಮ್ನೆ ಡೆಸ್ ಫೆಮ್ಮೆಸ್” ಹಾಡಿದ್ದಾರೆ.  ಇದು ಶೋಕ ಮತ್ತು ಮಹಿಳೆಯರ ಹಕ್ಕುಗಳನ್ನು ದುರ್ಬಲಗೊಳಿಸುವುದನ್ನು ಸಂಕೇತಿಸುತ್ತದೆ. ನಂತರ, ಅವರು #WomanLifeFreedom ಕ್ರಾಂತಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಇರಾನಿನ ಮಹಿಳೆಯರನ್ನು ಗೌರವಿಸಲು ವಿಕ್ಟೋರಿಯಾ ಗುಗೆನ್ಹೈಮ್ ನೇತೃತ್ವದ ಫಾರ್ಸಿಯಲ್ಲಿ ಸಮಾನತೆಯ ಹಾಡನ್ನು ಹಾಡಿದ್ದಾರೆ.

ಈ ಪ್ರತಿಭಟನೆಯ ಸಮಯದಲ್ಲಿ ಪ್ರತಿಯೊಬ್ಬ ಕಾರ್ಯಕರ್ತೆಯರು ತಮ್ಮ ಮೇಲಿನ ಪರದೆಯನ್ನು ತೆಗೆದುಹಾಕಿದ್ದಾರೆ. ಪರದೆಯನ್ನು ತೆಗೆದುಹಾಕುವುದು ಕೇವಲ ಸಾಂಕೇತಿಕವಲ್ಲ; ಇದು ಪುನಃ ಪಡೆದುಕೊಳ್ಳುವ ಪ್ರಜ್ಞಾಪೂರ್ವಕ ಕ್ರಿಯೆಯಾಗಿದೆ. ನಾವು ಮೌನವಾಗಿರಲು ನಿರಾಕರಿಸುತ್ತೇವೆ, ನಮ್ಮ ಮತ್ತು ನಮ್ಮ ಸಹೋದರಿಯರ ಸ್ವಾತಂತ್ರ್ಯಕ್ಕಾಗಿ ಹೋರಾಡುವುದನ್ನು ನಾವು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಫೆಮೆನ್ ಇನ್ಸ್ಟಾಗ್ರಾಂನಲ್ಲಿ ಹೇಳಿದೆ.

ಇದನ್ನೂ ಓದಿ:ಸರ್ಕಾರಿ ಕಟ್ಟಡದಲ್ಲೇ ಎಣ್ಣೆ ಪಾರ್ಟಿ; ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಪುರಸಭೆಯ ನೌಕರರು; ವಿಡಿಯೊ ನೋಡಿ

ಫೆಮೆನ್ ಎಂದರೇನು?
ಫೆಮೆನ್ ಜಾಗತಿಕ ಸ್ತ್ರೀವಾದಿ ಆಂದೋಲನವಾಗಿದ್ದು, ದಿಟ್ಟ, ಟಾಪ್ಲೆಸ್ ಪ್ರತಿಭಟನೆಗಳಿಗೆ ಹೆಸರುವಾಸಿಯಾಗಿದೆ. ಅವರ ವೆಬ್ಸೈಟ್ ಪ್ರಕಾರ, ಗುಂಪಿನ ಧ್ಯೇಯವು “ಪುರುಷ ಪ್ರಧಾನದ ವಿರುದ್ಧ ಸಂಪೂರ್ಣ ಗೆಲುವು”. ಫೆಮೆನ್ ಕಾರ್ಯಕರ್ತರು ತಮ್ಮ ದೇಹಗಳನ್ನು ಧಿಕ್ಕಾರದ ಸಂಕೇತವಾಗಿ ಬಳಸುತ್ತಾರೆ. ಹಾಗಾಗಿ ಅವರು ನಗ್ನವಾಗಿ ಹೋರಾಡುತ್ತಾರೆ. ತಮ್ಮ ಪ್ರಬಲ ಪ್ರತಿಭಟನೆಗಳ ಮೂಲಕ, ಫೆಮೆನ್ ವಿಶ್ವಾದ್ಯಂತ ಮಹಿಳೆಯರ ದಬ್ಬಾಳಿಕೆಯತ್ತ ಗಮನ ಸೆಳೆಯುತ್ತಲೇ ಇದೆ. ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯವನ್ನು ಒತ್ತಾಯಿಸುತ್ತಿದೆ.