Friday, 13th December 2024

ಜೂ.16 ರಿಂದ ಸ್ಮಾರಕ, ಪ್ರವಾಸಿ ತಾಣ, ವಸ್ತು ಸಂಗ್ರಹಾಲಯ ವೀಕ್ಷಣೆ

ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ಅಡಿಯಲ್ಲಿರುವ ಎಲ್ಲಾ ಸಂರಕ್ಷಿತ ಸ್ಮಾರಕಗಳು / ಪ್ರವಾಸಿ ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಜೂ.16 ರಿಂದ ತೆರೆಯಲಾಗುವುದು ಎಂದು ಸರ್ವೇಕ್ಷಣಾ ಸಂಸ್ಥೆ ಪ್ರಕಟಿಸಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಕರೋನಾದ ಎರಡನೇ ಅಲೆ ಪ್ರಾರಂಭವಾದಾಗ ಎಲ್ಲಾ ಸ್ಮಾರಕಗಳನ್ನು ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು. 100 ವರ್ಷಕ್ಕಿಂತ ಹಳೆಯದಾದ ಸ್ಮಾರಕಗಳೂ ಸೇರಿದಂತೆ ಒಟ್ಟು 3,684 ಸ್ಮಾರಕಗಳು ಎಎಸ್‌ಐ ವ್ಯಾಪ್ತಿ ಯಲ್ಲಿದೆ.

ಉತ್ತರ ಪ್ರದೇಶದಲ್ಲಿ 741 ಸ್ಮಾರಕಗಳಿವೆ. ಅದರಲ್ಲಿ ವಿಶ್ವ ಪ್ರಸಿದ್ಧ ತಾಜ್ ಮಹಲ್ ಮತ್ತು ಆಗ್ರಾ ಕೋಟೆಗಳು ಸೇರಿದೆ. ಕರ್ನಾಟಕದ ಹಂಪಿ, ಬಾದಾಮಿ, ಪಟ್ಟದಕಲ್ಲುಗೋಳಗುಮ್ಮಟ ಸೇರಿ ಅನೇಕ ಐತಿಹಾಸಿಕ ಸ್ಮಾರಕಗಳು ಸಹ ಎಎಸ್‌ಐ ವ್ಯಾಪ್ತಿಗೆ ಬರುತ್ತದೆ.