Wednesday, 11th December 2024

ಏಕತೆಯ ಪ್ರತಿಮೆ ವೀಕ್ಷಣೆ: ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

ಗುಜರಾತ್‌: ಸರ್ಧಾರ್‌ ಸರೋವರ್‌ ಡ್ಯಾಂನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ಏಕತೆಯ ಪ್ರತಿಮೆ ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.30.5 ಹೆಚ್ಚಳವಾಗಿದೆ. ಪ್ರತಿನಿತ್ಯ ಸರಾಸರಿ 12,369 ಪ್ರವಾಸಿಗರು ಪ್ರತಿಮೆ ವೀಕ್ಷಿಸಲು ಆಗಮಿಸುತ್ತಿದ್ದಾರೆ.

ಇದು ಕರೋನಾ ಪೂರ್ವ ಅವಧಿಗಿಂತಲೂ ಆ ಅವಧಿಯಲ್ಲಿ ಪ್ರತಿನಿತ್ಯ 10,194 ರಷ್ಟು ಪ್ರವಾಸಿಗರು ಆಗಮಿಸುತಿದ್ದರು. ವಾರಾತ್ಯದ ದಿನಗಳಲ್ಲಿ 18,187 ಜನರು ಆಗಮಿಸುತ್ತಿದ್ದಾರೆ ಎಂದು ಅಧಿಕಾರಿ ಯೊಬ್ಬರು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 31, 2018 ರಂದು ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏಕತಾ ಪ್ರತಿಮೆಯನ್ನು ಉದ್ಘಾಟಿಸಿದರು. ಉದ್ಘಾಟನೆಯಾದಾಗಿನಿಂದ ಇಲ್ಲಿಯವರೆಗೆ 7.94 ಮಿಲಿಯನ್ ಜನರು ಏಕತೆಯ ಪ್ರತಿಮೆಗೆ ಭೇಟಿ ನೀಡಿದ್ದಾರೆ.

ನವೆಂಬರ್ 2018 ರಿಂದ ಫೆಬ್ರವರಿ 2020 ರ ಅವಧಿಯಲ್ಲಿ ಟಿಕೆಟ್‌ಗಳ ಮಾರಾಟ ಹಾಗೂ ಪಾರ್ಕಿಂಗ್ ಶುಲ್ಕಗಳಿಂದಲೇ ಸ್ಟ್ಯಾಚ್ಯೂ ಆಫ್ ಯೂನಿಟಿಗೆ ₹ 116.31 ಕೋಟಿ ಆದಾಯ ಲಭಿಸಿದೆ ಎಂದು ಗುಜರಾತ್ ಸರ್ಕಾರ ಮಾಹಿತಿ ನೀಡಿದೆ.