Friday, 13th December 2024

ನಿಯಂತ್ರಣ ತಪ್ಪಿ ಉರುಳಿದ ಟ್ರ್ಯಾಕ್ಟರ್: 30 ಮಂದಿಗೆ ಗಾಯ

ನಲ್ಗೊಂಡ: ಜಿಲ್ಲೆಯ ದಾಮರಚಾರ್ಮಾಂಡಲ್ʼನಲ್ಲಿ ಭೀಕರ ರಸ್ತೆ ಅಪಘಾತವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ.

ಅಪಘಾತದಲ್ಲಿ 30 ಜನರು ಗಂಭೀರವಾಗಿ ಗಾಯಗೊಂಡಿದ್ದು, ಮಿರಿಯಾಲಗುಡ ಏರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಘಟನೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನ ಮಿರಿಯಾಲಗುಡ ಏರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರೆಲ್ಲರೂ ಗುಂಟೂರು ಜಿಲ್ಲೆಯ ಸಟ್ಟೆನಾಪಲ್ಲಿ ಗ್ರಾಮಸ್ಥರು ಎಂಬ ಮಾಹಿತಿಯನ್ನ ಪೊಲೀಸರು ನೀಡಿದ್ದಾರೆ. ಟ್ರ್ಯಾಕ್ಟ್‌ ರ್‌ʼನಲ್ಲಿದ್ದವರೆಲ್ಲರೂ ಜಂಪಹಾದ್ ದರ್ಗಾಕ್ಕೆ ತೆರಳುತ್ತಿದ್ದರು ಎನ್ನಲಾಗುತ್ತಿದೆ.