Friday, 13th December 2024

ಮತ್ತೆ ಟ್ವಿಟರ್ ಸೇವೆ ಸ್ಥಗಿತ

ವದೆಹಲಿ: ಪ್ರಪಂಚದಾದ್ಯಂತ ಮತ್ತೆ ಟ್ವಿಟರ್ ಸೇವೆ ಸ್ಥಗಿತಗೊಂಡಿದೆ. ಇದರ ವಿರುದ್ಧ ಬಳಕೆದಾರರು ಆಕ್ರೋಶ ಹೊರ ಹಾಕಿದ್ದಾರೆ.

ಭಾರತ ಸೇರಿದಂತೆ ಅಮೆರಿಕ, ಯುಕೆ ಮತ್ತು ಹೆಚ್ಚಿನ ಇತರ ದೇಶಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಬಳಕೆದಾರರು ಯಾವುದೇ ಫೀಡ್‌ಗಳನ್ನು ಪ್ರವೇಶಿ ಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.

ವೆಬ್‌ಸೈಟ್ ಔಟ್ಟೇಜ್ ಟ್ರ್ಯಾಕರ್ ಡೌನ್‌ಡೆಕ್ಟರ್ ಪ್ರಕಾರ, ಟ್ವಿಟರ್‌ನಲ್ಲಿ ಪ್ರವೇಶಿಸುವಿಕೆ ಸಮಸ್ಯೆಗಳು ಭಾರತದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದವು ಎಂದು ವರದಿ ಮಾಡಿದೆ.

ನವದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಲಕ್ನೋ, ಪಾಟ್ನಾ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲೂ ಇದೇ ಸಮಸ್ಯೆ ಎದುರಾಗಿದೆ ಎಂದು ವರದಿಯಾಗಿದೆ.