Wednesday, 11th December 2024

ಹಿಂಸಾಚಾರ: ಮತ್ತಿಬ್ಬರು ಆರೋಪಿಗಳ ಬಂಧನ

ನವದೆಹಲಿ : ಗಣರಾಜ್ಯೋತ್ಸವ(ಜನವರಿ 26) ದ ದಿನ ರೈತರ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೃಷಿ ಕಾನೂನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು ಜ.26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿ ದ್ದರು. ಈ ವೇಳೆ, ಹಲವಾರು ಪ್ರತಿಭಟನಾಕಾರರು ಕೆಂಪುಕೋಟೆಗೆ ನುಗ್ಗಿ ಧಾರ್ಮಿಕ ಧ್ವಜಗಳನ್ನು ಹಾರಿಸಿದ್ದರು.

ಇದೀಗ ಮಣಿಂದರ್ ಜಿತ್ ಸಿಂಗ್ ಡಚ್ ಪ್ರಜೆಯಾಗಿದ್ದು, ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಲೆಸಿದ್ದ, ನಕಲಿ ದಾಖಲೆ ಗಳೊಂದಿಗೆ ಭಾರತದಿಂದ ಪರಾರಿಯಾಗಲು ಯತ್ನಿಸಿದ್ದ ಈ ವೇಳೆ ಪೊಲೀಸರು ದೆಹಲಿ ಏರ್ ಪೋರ್ಟ್ ನಲ್ಲಿ ಬಂಧಿಸಿದ್ದಾರೆ. ಮತ್ತೊರ್ವ ಆರೋಪಿ ಖೇಮ್ ಪ್ರಿತ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.