Wednesday, 11th December 2024

ಪಂಜಾಬ್‌ನಲ್ಲಿ ’ಇಬ್ಬರು ಸಿಎಂ’ ವದಂತಿ ಅಲ್ಲಗಳೆದ ಕಾಂಗ್ರೆಸ್‌

ಚಂಡೀಗಢ/ನವದೆಹಲಿ: ಪಂಜಾಬ್‌ನಲ್ಲಿ ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಗು  ತ್ತದೆ ಎಂಬ ವದಂತಿಯನ್ನು ಕಾಂಗ್ರೆಸ್ ತಳ್ಳಿ ಹಾಕಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಒಬ್ಬರ ಹೆಸರನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಸಿಎಂ ಹುದ್ದೆಗಾಗಿ ಪೈಪೋಟಿಯ ನಡುವೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹಾಗೂ ಹಾಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಇಬ್ಬರಿಗೂ ಅವಕಾಶ ಕಲ್ಪಿಸಲು ಲೂಧಿಯಾನದಲ್ಲಿ ರಾಹುಲ್ ಗಾಂಧಿ ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸಲಿದ್ದಾರೆ ಎಂಬ ವರದಿಯಾಗಿತ್ತು.

ಸಿಎಂ ಹುದ್ದೆಗೆ ಚನ್ನಿ ಮುಂಚೂಣಿಯಲ್ಲಿರುವುದರಿಂದ ಗೊಂದಲಕ್ಕೊಳಗಾದ ಸಿಧು ತಮ್ಮದೇ ಪಕ್ಷದ ಮೇಲೆ ವಾಗ್ದಾಳಿ ಹೆಚ್ಚಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸಿಧು ಶುಕ್ರವಾರ, ಪಕ್ಷವು “ಪ್ರಾಮಾಣಿಕ ಮತ್ತು ಶುದ್ಧ ದಾಖಲೆ ಹೊಂದಿರುವ” ಯಾರನ್ನಾದರೂ ಆಯ್ಕೆ ಮಾಡಬೇಕು ಎಂದು ಹೇಳಿದ್ದರು.

ಚನ್ನಿ ಅವರನ್ನು ಸಿಎಂ ಹುದ್ದೆಗೆ ಒಲವು ತೋರಲಾಗಿದೆ ಎಂದು ಕಾಂಗ್ರೆಸ್ ಇತ್ತೀಚೆಗೆ ಹಲವಾರು ಸೂಚನೆಗಳನ್ನು ನೀಡಿದೆ.