Saturday, 12th October 2024

ಎರಡು ಪ್ರತ್ಯೇಕ ಎನ್‌ಕೌಂಟರ್: ಬಾಲಾಪರಾಧಿ ಸೇರಿ ಐದು ಮಂದಿ ಉಗ್ರರ ಹತ್ಯೆ

ಶ್ರೀನಗರ: ಶೋಪಿಯಾನ್ ಮತ್ತು ಅನಂತನಾಗ್ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಒಬ್ಬ ಬಾಲಾಪರಾಧಿ ಸೇರಿದಂತೆ ಐವರು ಉಗ್ರರು ಮೃತಪಟ್ಟರು.

ಶೋಪಿಯಾನ್ ಜಿಲ್ಲೆಯ ಚಿತ್ರಗಂನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತರಾದರು. ಇವರಲ್ಲಿ ಒಬ್ಬ ಬಾಲಪ ರಾಧಿಯೂ ಸೇರಿದ್ದಾನೆ’ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಬಾಲಾಪರಾಧಿಯನ್ನು 10ನೇ ತರಗತಿಯ ವಿದ್ಯಾರ್ಥಿ ಫೈಸಲ್ ಗುಲಾರ್ ಎಂದು ಗುರುತಿಸಲಾಗಿದೆ. ಹತರಾದ ಮೂವರು ಉಗ್ರರು ಸ್ಥಳೀಯ ಅಲ್-ಬದ್ರ್ ಸಂಘಟನೆಗೆ ಸೇರಿದವರು’ ಎಂದು ಕಾಶ್ಮೀರದ ಐಜಿಪಿ ವಿಜಯಕುಮಾರ್ ತಿಳಿಸಿದ್ದಾರೆ.

‘ನಾಲ್ವರು ಸಹೋದರಿಯರನ್ನು ಹೊಂದಿದ್ದ ಫೈಸಲ್ ಗುಲಾರ್ ಕಳೆದ ಮಂಗಳವಾರವಷ್ಟೇ ಉಗ್ರ ಸಂಘಟನೆಗೆ ಸೇರ್ಪಡೆ ಗೊಂಡಿದ್ದ’ ಎಂದು ವರದಿ ಮಾಡಿವೆ.

‘ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾದ ಸೆಮ್‌ಥಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ಶನಿವಾರ ರಾತ್ರಿ ನಡೆದ ಪ್ರತ್ಯೇಕ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ. ಉಗ್ರರು ಎರಡು ದಿನಗಳ ಹಿಂದೆಯಷ್ಟೇ ಸೈನಿಕನೊಬ್ಬನನ್ನು ಕೊಂದಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily