Saturday, 14th December 2024

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಮೊತ್ತ

ನವದೆಹಲಿ : ರಸ್ತೆ ಅಪಘಾತ(‘ಹಿಟ್ ಅಂಡ್ ರನ್’) ದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು 25 ಸಾವಿರದಿಂದ 2 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಿಟ್ ಅಂಡ್ ರನ್ ರಸ್ತೆ ಅಪಘಾತ ಸಂತ್ರಸ್ತರಿಗೆ ಪರಿಹಾರದ ಮೊತ್ತವನ್ನ ಹೆಚ್ಚಿಸುವ ಯೋಜನೆಯನ್ನ ಪ್ರಸ್ತಾಪಿಸಿತ್ತು. ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ.ಗಳ ಪರಿಹಾರ ನೀಡಲಾಗುವುದು.

ಈ ಪರಿಹಾರಕ್ಕಾಗಿ ಯೋಜನೆಯನ್ನ ಬದಲಾಯಿಸುವ ಅವಶ್ಯಕತೆ ಇದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಗಂಭೀರ ಗಾಯಕ್ಕೆ 12,500 ರಿಂದ 50,000 ರೂ ಮತ್ತು ಸಾವಿಗೆ 25,000 ದಿಂದ 2,00,000 ರೂ. ಹೆಚ್ಚಿಸಲಾಗಿದೆ. 1989 ರಲ್ಲಿ ಮಾಡಿದ ಪರಿಹಾರ ಯೋಜನೆಯ ಬದಲಿಗೆ ಈ ಯೋಜನೆ ಯನ್ನ ಜಾರಿಗೊಳಿಸಲಾಗುವುದು. ಅಧಿಕೃತ ಅಂಕಿಅಂಶಗಳ ಪ್ರಕಾರ, 2019 ರಲ್ಲಿ ದೇಶದಲ್ಲಿ ಒಟ್ಟು 4,49,002 ರಸ್ತೆ ಅಪಘಾತಗಳಲ್ಲಿ 1,51,113 ಜನರು ಮೃತಪಟ್ಟಿದ್ದಾರೆ.

ಹಿಟ್ ಮತ್ತು ರನ್ ಅಪಘಾತಗಳ ಸಂದರ್ಭದಲ್ಲಿ ಪರಿಹಾರಕ್ಕಾಗಿ ಮತ್ತು ಅಪಘಾತ ಸಂತ್ರಸ್ತರ ಚಿಕಿತ್ಸೆಗಾಗಿ ಬಳಸಲಾಗುತ್ತದೆ.