Friday, 13th December 2024

ಗುಂಡಿನ ಕಾಳಗ: ಇಬ್ಬರು ಯೋಧರು ಹುತಾತ್ಮ, ಉಗ್ರನ ಹತ್ಯೆ

ಜಮ್ಮು-ಕಾಶ್ಮೀರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಶನಿವಾರ ನಡೆದ ಗುಂಡಿನ ಕಾಳಗ ದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಪ್ರತಿದಾಳಿಯಲ್ಲಿ ಉಗ್ರನನ್ನು ಹತ್ಯೆ ಮಾಡಲಾ ಗಿದೆ.

ಶೋಪಿಯಾನ್ ಪ್ರದೇಶದಲ್ಲಿ ಉಗ್ರರ ವಿರುದ್ಧದ ಜಂಟಿ ಕಾರ್ಯಾಚರಣೆ ಸಂದರ್ಭದಲ್ಲಿ ಗುಂಡಿನ ಚಕಮಕಿ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿರುವುದಾಗಿ ಮೂಲಗಳು ಹೇಳಿವೆ. ಹುತಾತ್ಮರಾದ ಯೋಧರನ್ನು ಸಂತೋಷ್ ಯಾದವ್ ಮತ್ತು ಚವನ್ ರೋಮಿಟ್ ತಾನಾಜಿ ಎಂದು ಗುರುತಿಸಲಾಗಿದೆ.

ಶನಿವಾರ ಜಮ್ಮು-ಕಾಶ್ಮೀರ ಪೊಲೀಸರು, ಸೇನೆ ಮತ್ತು ಅರೆಸೇನಾಪಡೆ ಜತೆಗೂಡಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಝೈನ್ ಪೋರಾದ ಚೆರ್ ಮಾರ್ಗ್ ಗ್ರಾಮ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ರುವುದಾಗಿ ವರದಿ ತಿಳಿಸಿದೆ.