Saturday, 14th December 2024

ರಾಷ್ಟ್ರೀಯ ಅರ್ಹತಾ ಪರೀಕ್ಷೆ (ugc-net) ಫಲಿತಾಂಶ ಪ್ರಕಟ

ನವದೆಹಲಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಫಲಿತಾಂಶವನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ ಶನಿವಾರ ಘೋಷಿಸಿದೆ.

ಸುಮಾರು 12 ಲಕ್ಷ ಅಭ್ಯರ್ಥಿಗಳು ಯುಜಿಸಿ ನೆಟ್ ಪರೀಕ್ಷೆಗೆ ಹಾಜರಾಗಿದ್ದರು. ಡಿಸೆಂಬರ್ ಮತ್ತು ಜೂನ್ ಸೆಷನ್ ಪರೀಕ್ಷೆಗಳಲ್ಲಿ ಹಾಜರಾಗಿದ್ದ ಅಭ್ಯರ್ಥಿ ಗಳು ತಮ್ಮ ರೋಲ್ ಸಂಖ್ಯೆಗಳ ಸಹಾಯದಿಂದ ugcnet.nta.nic.in ಮತ್ತು nta.ac.in ತಮ್ಮ ಫಲಿತಾಂಶಗಳನ್ನು ಡೌನ್ ಲೋಡ್ ಮಾಡಬಹುದು.

ಅಭ್ಯರ್ಥಿಗಳು ತಮ್ಮ ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗಿನ್ ಮಾಡಬೇಕು. ಈ ಬಳಿಕ ಫಲಿತಾಂಶವನ್ನು ಡೌನ್ ಲೋಡ್ ಮಾಡಬೇಕು.  ಯುಜಿಸಿ-ನೆಟ್ ಪರೀಕ್ಷೆಗೆ 12 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದರು.

ಯುಜಿಸಿ-ನೆಟ್ ಪರೀಕ್ಷೆಯು ಭಾರತದ 239 ನಗರಗಳಲ್ಲಿ ಹರಡಿರುವ 837 ಕೇಂದ್ರಗಳಲ್ಲಿ 81 ವಿಷಯಗಳಲ್ಲಿ ನಡೆಯಿತು.