Monday, 14th October 2024

ಇಂದು ಕೇಂದ್ರ ಹಣಕಾಸು ಬಜೆಟ್ ಮಂಡನೆ

ನವದೆಹಲಿ: ಸೋಮವಾರ (ಫೆ.1) ಪ್ರಸಕ್ತ ಸಾಲಿನ  ಕೇಂದ್ರ ಬಜೆಟ್‌ ಮಂಡನೆಯಾಗುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿದ್ದಾರೆ.

ಇಂದಿನ ಬಜೆಟ್ ನ ‌ ತಂಡದ ಪ್ರಮುಖರ ವಿವರ ಇಂತಿದೆ.

ನಿರ್ಮಲಾ ಸೀತಾರಾಮನ್‌: ಕೇಂದ್ರ ಹಣಕಾಸು ಸಚಿವರಾಗಿ ಮೂರನೇ ಬಜೆಟ್‌ ಅನ್ನು ಮಂಡಿಸಲಿದ್ದಾರೆ.

ಅಜಯ್‌ ಭೂಷಣ್‌ ಪಾಂಡೆ: ಹಣಕಾಸು ಇಲಾಖೆಯ ಹಿರಿಯ ಕಾರ್ಯದರ್ಶಿ. ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಸಿಇಒ ಆಗಿದ್ದವರು. ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ಮುಖ್ಯಸ್ಥರಾಗಿ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಕೃಷ್ಣಮೂರ್ತಿ ಸುಬ್ರಮಣಿಯನ್‌: ಮುಖ್ಯ ಆರ್ಥಿಕ ಸಲಹೆಗಾರರು. ಅರ್ಥಶಾಸ್ತ್ರ, ಬ್ಯಾಂಕಿಂಗ್‌, ಕಾರ್ಪೊರೇಟ್‌ ಆಡಳಿತ ತಜ್ಞರು.

ಟಿ.ವಿ ಸೋಮನಾಥನ್‌: ವೆಚ್ಚ ಇಲಾಖೆ ಕಾರ್ಯದರ್ಶಿ. 1987ರ ಬ್ಯಾಚ್‌ ನ ಐಎಎಸ್‌ ಅಧಿಕಾರಿ.

ತರುಣ್‌ ಬಜಾಜ್‌: ಆರ್ಥಿಕ ವ್ಯವಹಾರ ಇಲಾಖೆ ಕಾರ್ಯದರ್ಶಿ. 1988ರ ಬ್ಯಾಚ್‌ನ ಅಧಿಕಾರಿ (ಹರಿಯಾಣ). ಬಜಾಜ್ ಕಳೆದ ವರ್ಷ ಮೇ ತಿಂಗಳಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು.

ತುಹಿನ್‌ ಕಾಂತಾ: ಹೂಡಿಕೆ ಮತ್ತು ಸಾರ್ವಜಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ.

ದೇಬಶೀಷ್‌ ಪಾಂಡ: ಕಾರ್ಯದರ್ಶಿ ಹಣಕಾಸು ಇಲಾಖೆ. ಉತ್ತರ ಪ್ರದೇಶ ಕೇಡರ್ ನ 1987ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಪಾಂಡಾ ಅವರನ್ನು ಈ ಮೊದಲು ಹಣಕಾಸು ಸೇವೆಗಳ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.