Wednesday, 11th December 2024

Reliance Foundation: ʼರಿಲಯನ್ಸ್ ಫೌಂಡೇಷನ್ ಕೌಶಲ ಸಂಸ್ಥೆʼಗೆ ಚಾಲನೆ ನೀಡಿದ ಕೇಂದ್ರ ಸಚಿವ ಜಯಂತ್ ಚೌಧರಿ

Reliance Foundation

ಮುಂಬೈ: ಭವಿಷ್ಯದ ಉದ್ಯೋಗಗಳಿಗೆ ಭಾರತೀಯ ಯುವಜನರು ಸಿದ್ಧಗೊಳ್ಳುವ ಪ್ಲಾಟ್ ಫಾರ್ಮ್ ಆಗಿರುವ ರಿಲಯನ್ಸ್ ಫೌಂಡೇಷನ್ ಕೌಶಲ ಸಂಸ್ಥೆಗೆ (Reliance Foundation) ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ (ಸ್ವತಂತ್ರ ನಿರ್ವಹಣೆ) ಹಾಗೂ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಚಾಲನೆ ನೀಡಿದರು.

ʼಭವಿಷ್ಯದ ಉದ್ಯೋಗಕ್ಕಾಗಿ ಯವಜನರ ಸಬಲೀಕರಣʼ ಎಂಬ ವಿಷಯದ ಮೇಲೆ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಈ ಪ್ಲಾಟ್ ಫಾರ್ಮ್‌ಗೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮದ ಸಹಯೋಗದಲ್ಲಿ ರಿಲಯನ್ಸ್ ಫೌಂಡೇಷನ್ ಇದನ್ನು ಆಯೋಜಿಸಿತ್ತು. ಸರ್ಕಾರ, ನೀತಿ ನಿರೂಪಕರು, ಕಾರ್ಪೊರೇಟ್ ದಾನಿಗಳು, ನಾಗರಿಕ ಸಮಾಜ ಹಾಗೂ ಶಿಕ್ಷಣ ತಜ್ಞರು ಹೀಗೆ ವಿವಿಧ ವಲಯಗಳಿಂದ ಭಾಗವಹಿಸಿದ್ದವರು ಭಾರತೀಯ ಯುವಜನರ ಕೌಶಲದ ಬಗ್ಗೆ ಚರ್ಚಿಸುವುದಕ್ಕೆ ಧ್ವನಿಯಾದರು.

ಈ ಸುದ್ದಿಯನ್ನೂ ಓದಿ | Sandalwood News: ಸ್ಮೈಲ್ ಗುರು ರಕ್ಷಿತ್ ಸಿನಿಮಾಗೆ ‘ಭೀಮ’ ಬಲ; ಸಮುದ್ರದ ಆಳದಲ್ಲಿ’ಅಮ್ಮು’ ಟೈಟಲ್ ಟೀಸರ್ ರಿಲೀಸ್

ಈ ವೇಳೆ ಕೇಂದ್ರ ಸಚಿವ ಜಯಂತ್ ಚೌಧರಿ ಮಾತನಾಡಿ, “ಯುವಜನರಲ್ಲಿ ಜೀವನಪರ್ಯಂತ ಕಲಿಕೆ ಸಂಸ್ಕೃತಿಯನ್ನು ಬೆಳೆಸುವುದು ನಮ್ಮ ಗುರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದಲ್ಲಿ ದೇಶದ ಯುವಜನರ ಸಬಲೀಕರಣ ಮಾಡುವುದು, 21ನೇ ಶತಮಾನದ ಕೌಶಲಗಳನ್ನು ನಮ್ಮ ಯುವಜನರಿಗೆ ಕಲಿಸುವುದಕ್ಕೆ ರಿಲಯನ್ಸ್ ಫೌಂಡೇಷನ್ ಕೌಶಲ ಅಕಾಡೆಮಿ ಎಂಬ ನವೀನ ಪ್ಲಾಟ್ ಫಾರ್ಮ್ ವೇದಿಕೆಯನ್ನು ಇಂದು ಪ್ರಾರಂಭಿಸುವುದಕ್ಕೆ ಸಂತೋಷವಾಗಿದೆ. ನುರಿತ ಉದ್ಯೋಗಿಗಳ ಬೇಡಿಕೆ ಪೂರೈಸುವುದಕ್ಕೆ, ಯುವಕರ ಜೀವನ ಗುಣಮಟ್ಟ ಹೆಚ್ಚಿಸುವುದಕ್ಕೆ ಹಾಗೂ ನಮ್ಮ ಸಾಮೂಹಿಕ ಪ್ರಯತ್ನಗಳ ವರ್ಧನೆಗೆ ನವೀನ ಆಲೋಚನೆಗಳನ್ನು ಅಳವಡಿಸಿಕೊಳ್ಳಲು ಹೀಗೆ ಮೂರು ಉದ್ದೇಶಗಳನ್ನು ಸಾಧಿಸಲು ಇದು ಉತ್ತಮ ಅವಕಾಶ” ಎಂದು ತಿಳಿಸಿದರು.

ರಿಲಯನ್ಸ್ ಫೌಂಡೇಷನ್‌ನ ಸಿಇಒ ಜಗನ್ನಾಥ ಕುಮಾರ್ ಮಾತನಾಡಿ , “ಯುವಕರು ತಮ್ಮ ಆಕಾಂಕ್ಷೆಗಳನ್ನು ಸಾಧಿಸಲು ಅನುವು ಮಾಡಿಕೊಡುವುದು ರಿಲಯನ್ಸ್ ಫೌಂಡೇಷನ್‌ನ ಪ್ರಮುಖ ತತ್ವದ ಒಂದು ಭಾಗವಾಗಿದೆ. ರಿಲಯನ್ಸ್ ಫೌಂಡೇಷನ್ ಸ್ಕಿಲಿಂಗ್ ಅಕಾಡೆಮಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಆ ಆಕಾಂಕ್ಷೆಗಳನ್ನು ಪೂರೈಸುವ ಮತ್ತು ಯುವಕರನ್ನು ಸಿದ್ಧಪಡಿಸುವ ಒಂದು ಹೆಜ್ಜೆಯಾಗಿದೆ.

ಇದು ನಮ್ಮ ಯುವಜನರನ್ನು ಅವರು ಯಶಸ್ವಿಯಾಗಲು ಅಗತ್ಯವಿರುವ ಕೌಶಲಗಳೊಂದಿಗೆ ಸಜ್ಜುಗೊಳಿಸಲು ಶಿಕ್ಷಣ ಮತ್ತು ಉದ್ಯೋಗದ ಮಧ್ಯದ ಅಂತರವನ್ನು ಕಡಿಮೆ ಮಾಡುತ್ತದೆ. ಉದ್ಯೋಗಗಳು ಮತ್ತು ಉದ್ಯಮಶೀಲತೆಯನ್ನು ಬೆಳೆಸಲು ರಿಲಯನ್ಸ್ ಫೌಂಡೇಷನ್ ಕೌಶಲ ಅಕಾಡೆಮಿಯು ಪಾಲುದಾರಿಕೆಗಳನ್ನು ರೂಪಿಸುವ ಮೂಲಕ ಸಹಕಾರಿ ಪರಿಸರ ವ್ಯವಸ್ಥೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಕೌಶಲ ಅಭಿವೃದ್ಧಿಯಲ್ಲಿ ನಾವೀನ್ಯತೆಯನ್ನು ಹೆಚ್ಚಿಸಲು ಪ್ರಮುಖ ಪಾಲುದಾರರನ್ನು ಒಗ್ಗೂಡಿಸುತ್ತದೆ” ಎಂದರು.

ರಿಲಯನ್ಸ್ ಫೌಂಡೇಷನ್ ಸ್ಕಿಲ್ಲಿಂಗ್ ಅಕಾಡೆಮಿ- www.rfskillingacademy.com ಎಲ್ಲರಿಗೂ ಮುಕ್ತ ವೇದಿಕೆಯಾಗಿದ್ದು, ಅದು ಕೌಶಲ ನಿರ್ಮಾಣ, ವೈಯಕ್ತೀಕರಿಸಿದ ತಜ್ಞರ ಮಾರ್ಗದರ್ಶನ ಮತ್ತು ಅರ್ಥಪೂರ್ಣ ಉದ್ಯೋಗಕ್ಕಾಗಿ ಉದ್ಯಮದ ಸಂಪರ್ಕಗಳನ್ನು ಸುಗಮಗೊಳಿಸುತ್ತದೆ.

ಈ ಸುದ್ದಿಯನ್ನೂ ಓದಿ | Air Pollution: ಬೆಂಗಳೂರು, ಮೈಸೂರು, ಮಂಗಳೂರಿನ ಗಾಳಿಯ ಗುಣಮಟ್ಟ ತೀವ್ರ ಕುಸಿತ; ಗ್ರೀನ್ ಪೀಸ್ ಇಂಡಿಯಾ ಹೇಳಿದ್ದೇನು?

ರಿಲಯನ್ಸ್ ಫೌಂಡೇಷನ್ ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ರಿಲಯನ್ಸ್ ಫೌಂಡೇಷನ್ ಸ್ಕಿಲ್ಲಿಂಗ್ ಅಕಾಡೆಮಿಯಲ್ಲಿ ಸಹಯೋಗ ವಹಿಸಲು ಒಪ್ಪಿಕೊಂಡಿವೆ ಮತ್ತು ವೇದಿಕೆಯಲ್ಲಿ ಅಭಿವೃದ್ಧಿಪಡಿಸಿದ ಭವಿಷ್ಯದ-ಆಧಾರಿತ ಕೌಶಲ ಕೋರ್ಸ್‌ಗಳ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಆ ಮೂಲಕ ಸ್ಕಿಲ್ ಇಂಡಿಯಾ ಮಿಷನ್ ಅನ್ನು ಬೆಂಬಲಿಸುತ್ತದೆ.