Sunday, 6th October 2024

UP Horror: ರುಂಡವೂ ಇಲ್ಲ.. ಮೈಮೇಲೆ ಬಟ್ಟೆಯೂ ಇಲ್ಲ; ಹೈವೇಯಲ್ಲಿ ಪತ್ತೆಯಾಯ್ತು ಮಹಿಳೆಯ ನಗ್ನ ಮೃತದೇಹ

UP Horror

ಲಕ್ನೋ: ರಾಷ್ಟ್ರೀಯ ಹೆದ್ದಾರಿಯಲ್ಲಿ ರುಂಡವಿಲ್ಲದ ಮಹಿಳೆಯ ನಗ್ನ ಮೃತದೇಹ(UP Horror)ವೊಂದು ಪತ್ತೆಯಾಗಿರುವ ಶಾಕಿಂಗ್‌ ಘಟನೆ ಉತ್ತರಪ್ರದೇಶ(Uttar Pradesh)ದಲ್ಲಿ ನಡೆದಿದೆ. ಕಾನ್ಪುರದ ಗುಜೈನಿ ಎಂಬಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಮಹಿಳೆಯ ತಲೆಯಿಲ್ಲದ ಮತ್ತು ಬೆತ್ತಲೆ ಶವ ಪತ್ತೆ(Headless Naked Body Found)ಯಾಗಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಶವವನ್ನು ಹೆದ್ದಾರಿಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಮಹಿಳೆಯ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮಹಿಳೆಯನ್ನು ಗುರುತಿಸಲು ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ದುರ್ಘಟನೆಗೂ ಮುನ್ನ ಮಹಿಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ದೃಶ್ಯಗಳಲ್ಲಿ ಮಹಿಳೆ ಬೂದು ಬಣ್ಣದ ಪ್ಯಾಂಟ್ ಧರಿಸಿರುವುದನ್ನು ಕಾಣಬಹುದು ಮತ್ತು ಪತ್ತೆಯಾಗಿರುವ ಮೃತದೇಹದ ಬಳಿ ಬೂದು ಬಣ್ಣದ ಬಟ್ಟೆಯ ಚೂರುಗಳು ಕಂಡುಬಂದಿವೆ.

ನಿನ್ನೆ ಬೆಳಗ್ಗೆ 6.15ಕ್ಕೆ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ. ಶವ ಪತ್ತೆಯಾದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ, ಆದರೆ ಸುಮಾರು 3 ಕಿಮೀ ದೂರದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಮಹಿಳೆಯೊಬ್ಬರು ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಮಹಿಳೆ ಧರಿಸಿರುವ ಬಟ್ಟೆಗಳು ಹೆದ್ದಾರಿಯಲ್ಲಿ ಕಂಡುಬರುವ ಬಟ್ಟೆಯ ತುಂಡುಗಳು ಮತ್ತು ಚಪ್ಪಲಿಗಳಿಗೆ ಹೊಂದಿಕೆಯಾಗುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡುತ್ತಿದ್ದು, ಹೆಚ್ಚಿನ ಸುಳಿವು ಸಿಗಲಿದೆ.

ಸಾವಿಗೆ ಕಾರಣವನ್ನು ಖಚಿತಪಡಿಸಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಯಾವುದೇ ದೂರು ಸಿಕ್ಕಿಲ್ಲ. ಪೊಲೀಸರು ಈಗ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಲ್ಲಿ ಮಹಿಳೆಯ ಬಗ್ಗೆ ವಿಚಾರಿಸುತ್ತಿದ್ದಾರೆ. ವಿಧಿ ವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷೆಗಾಗಿ ಹಲ್ಲು ಮತ್ತು ಮೂಳೆಗಳ ಮಾದರಿಗಳನ್ನು ಸಂಗ್ರಹಿಸಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ಸಂಸದ ಮತ್ತು ಯುಪಿಯ ಪ್ರಮುಖ ಪ್ರತಿಪಕ್ಷ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. “ಮಹಿಳೆಯರ ವಿರುದ್ಧದ ಮತ್ತೊಂದು ಆಘಾತಕಾರಿ ಅಪರಾಧ ಪ್ರಕರಣದಲ್ಲಿ, ಕಾನ್ಪುರದ ಹೆದ್ದಾರಿಯಲ್ಲಿ ಮಹಿಳೆಯ ತಲೆಯಿಲ್ಲದ, ಬೆತ್ತಲೆ ಶವ ಪತ್ತೆಯಾಗಿದೆ. ಈ ವಿಷಯವನ್ನು ನ್ಯಾಯಯುತವಾಗಿ ತನಿಖೆ ನಡೆಯಬೇಕು. ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಬಿಹಾರದಿಂದ ಉತ್ತರಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 95 ಮಕ್ಕಳ ರಕ್ಷಣೆ