Saturday, 14th December 2024

Upendra Met Allu Arjun: ಜೈಲಿಂದ ರಿಲೀಸ್‌ ಆಗಿರೋ ಅಲ್ಲು ಅರ್ಜುನ್‌ ಭೇಟಿಯಾದ ರಿಯಲ್‌ ಸ್ಟಾರ್‌ ಉಪ್ಪಿ

ಹೈದರಾಬಾದ್: UI ಚಿತ್ರದ ಪ್ರಮೋಷನ್‌ಗಾಗಿ(UI Promotion) ಹೈದರಾಬಾದ್‌ಗೆ(Hyderabad) ತೆರಳಿದ್ದ ರಿಯಲ್‌ ಸ್ಟಾರ್‌(Real Star) ಉಪೇಂದ್ರ(Upendra) ಅವರು ತೆಲುಗು ಚಿತ್ರರಂಗದ ಐಕಾನ್‌ ಸ್ಟಾರ್‌(Icon Star) ಅಲ್ಲು ಅರ್ಜುನ್‌ (Allu Arjun) ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.(Upendra Meet Allu)

ಅಲ್ಲು ಅರ್ಜುನ್‌ ಅವರು ರಿಲೀಸ್‌ ಆದ ಬೆನ್ನಲ್ಲೇ ಭಾರತೀಯ ಚಿತ್ರರಂಗದ ಹಲವು ನಟರು ಅವರನ್ನು ಭೇಟಿಯಾಗುತ್ತಿದ್ದಾರೆ. ಇದೀಗ ಚಿತ್ರತಂಡದೊಂದಿಗೆ ತಮ್ಮ UI ಸಿನಿಮಾ ಪ್ರಮೋಷನ್‌ಗಾಗಿ ಹೈದರಾಬಾದ್‌ಗೆ ಹೋಗಿದ್ದ ಕನ್ನಡದ ಖ್ಯಾತ ನಟ ಉಪೇಂದ್ರ ಕೂಡ ಅಲ್ಲು ಅರ್ಜುನ್‌ ಅವರ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದು, ಸುದೀರ್ಘವಾಗಿ ಮಾತನಾಡಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ಪರಸ್ಪರ ಇಬ್ಬರೂ ತಬ್ಬಿಕೊಂಡು ಖುಷಿಯಿಂದ ಮಾತನಾಡಿದ್ದಾರೆ.

ಪುಷ್ಪಾ2 ಸಿನಿಮಾದ ಯಶಸ್ಸಿಗೆ ರಿಯಲ್‌ ಸ್ಟಾರ್‌ ಶುಭಾಶಯ ತಿಳಿಸಿದ್ದು, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಒಳ್ಳೆಯದಾಗುತ್ತೆ ಎಂಬಂಥ ಭರವಸೆಯ ಮಾತುಗಳನ್ನು ಆಡಿದ್ದಾರೆ. ಇನ್ನು ತೆಲುಗುವಿನಲ್ಲಿ UI ಚಿತ್ರ ಪ್ರದರ್ಶನಕ್ಕೆ ಫುಲ್‌ ಸಾಥ್‌ ಕೊಡುವುದಾಗಿ ಅಲ್ಲು ಹೇಳಿದ್ದಾರೆ. ಈ ವೇಳೆ ಉಪೇಂದ್ರ ಅವರ ಜೊತೆಗೆ UI ಚಿತ್ರದ ನಿರ್ಮಾಪಕ ಲಹರಿ ವೇಲು ಇದ್ದರು ಎಂದು ತಿಳಿದು ಬಂದಿದೆ. ಈ ಹಿಂದೆ ಸನ್‌ ಆಫ್‌ ಸತ್ಯಮೂರ್ತಿ ಸಿನಿಮಾದಲ್ಲಿ ಉಪೇಂದ್ರ ಮತ್ತು ಅಲ್ಲು ಅರ್ಜುನ್‌ ಒಟ್ಟಿಗೆ ನಟಿಸಿದ್ದರು.

ಡಿಸೆಂಬರ್ 4ರಂದು ಪುಷ್ಪ-2 ಸಿನಿಮಾದ ಪ್ರೀಮಿಯರ್​ ನೋಡಲು ಬಂದಿದ್ದ ರೇವತಿ ಎನ್ನುವ ಮಹಿಳೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ(ಡಿ.13) ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ಅರೆಸ್ಟ್‌ ಆದ ದಿನವೇ ಅಲ್ಲು ಅರ್ಜುನ್‌ಗೆ ಜಾಮೀನು​ ಸಿಕ್ಕಿತು. ಶನಿವಾರ (ಡಿ.14) ಬೆಳಗ್ಗೆ ನಟ ಅಲ್ಲು ಅರ್ಜುನ್‌ ಅವರನ್ನು ಬಿಡುಗಡೆ ಮಾಡಲಾಯಿತು. ಸದ್ಯ ಅವರು ತಮ್ಮ ಮನೆಗೆ ವಾಪಸ್ ಆಗಿದ್ದಾರೆ. ಅಲ್ಲು ಬಿಡುಗಡೆಯಾಗಿ ಮನೆಗೆ ಬರುತ್ತಿದ್ದಂತೆ ಸಂಬಂಧಿಕರು, ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ಹಲವು ಗಣ್ಯರು ನಟನನ್ನು ಭೇಟಿಯಾಗಲು ಅವರ ನಿವಾಸಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿಯಿದೆ.

ಪತ್ನಿ, ಮಗಳನ್ನು ತಬ್ಬಿಕೊಂಡು ಭಾವುಕರಾದ ಅಲ್ಲು ಅರ್ಜುನ್

ನಿನ್ನೆ ಇಡೀ ರಾತ್ರಿ ಜೈಲಿನಲ್ಲಿ ಕಳೆದಿದ್ದ ನಟ ಇಂದು ಹೊರಬಂದಿದ್ದುತಂದೆ-ತಾಯಿ ಮತ್ತು ಕುಟುಂಬದ ಇತರ ಸದಸ್ಯರನ್ನೂ ಭೇಟಿಯಾಗಿದ್ದಾರೆ. ಇನ್ನು ಮನೆಗೆ ಬಂದ ಅಲ್ಲು ಓಡಿ ಹೋಗಿ ತಮ್ಮ ಮಗಳನ್ನು ಎತ್ತಿಕೊಂಡು ಮುದ್ದಾಡಿದ್ದು, ಹೆಂಡತಿಯನ್ನು ತಬ್ಬಿಕೊಂಡಿದ್ದಾರೆ. ಮನೆಯವರು ನಟನಿಗೆ ಕುಂಬಳಕಾಯಿ ನಿವಾಳಿಸಿ ದೃಷ್ಟಿ ತೆಗೆದು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ. ಆ ವಿಡಿಯೊವನ್ನು ಹಲವು ಅಭಿಮಾನಿಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿದ್ದಾರೆ.

ಅಲ್ಲು ಅರ್ಜುನ್‌ ಬಂಧನ ಇಡೀ ತೆಲಗು ಚಿತ್ರರಂಗಕ್ಕೆ ದೊಡ್ಡ ಶಾಕ್‌ ಕೊಟ್ಟಿತ್ತು. “ಇದೊಂದು ಶಾಕಿಂಗ್‌ ಸುದ್ದಿ, ನನಗೆ ಆಘಾತವಾಗಿದೆ. ಯಾವುದನ್ನೂ ನಂಬಲು ಸಾಧ್ಯವಾಗುತ್ತಿಲ್ಲ” ಎಂದು ನಟಿ ರಶ್ಮಿಕಾ ಮಂದಣ್ಣ ಟ್ವೀಟ್‌ ಮಾಡಿದ್ದರು. ಅಷ್ಟೇ ಅಲ್ಲದೇ ಅನೇಕ ನಟ-ನಟಿಯರು ಅಲ್ಲು ಅರ್ಜುನ್‌ ಪರ ಧ್ವನಿ ಎತ್ತಿದ್ದರು.

ಈ ಸುದ್ದಿಯನ್ನೂ ಓದಿ:Sambhal Mosque: ಕಿವಿ ಕಿತ್ತು ಹೋಗುವಂಥ ಲೌಡ್‌ ಸ್ಪೀಕರ್- ಸಂಭಾಲ್‌ ಮಸೀದಿಗೆ ಬಿತ್ತು 2 ಲಕ್ಷ ರೂ. ದಂಡ; ಇಮಾಮ್‌ ಅರೆಸ್ಟ್‌