Saturday, 23rd November 2024

ಪ್ರತಿ ಡಾಲರ್ ವಿರುದ್ಧ ರುಪಾಯಿ ಮೌಲ್ಯ 82.30 ರು.

ನವದೆಹಲಿ: ಭಾರತೀಯ ಕರೆನ್ಸಿ ಮೌಲ್ಯವನ್ನು 82ರ ಗಡಿಯಿಂದ ಮೇಲಕ್ಕೇರದಂತೆ ಹಿಡಿದಿಟ್ಟುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶುಕ್ರವಾರ ಮಾರುಕಟ್ಟೆ ಆರಂಭದಲ್ಲೇ ರುಪಾಯಿ ಕುಸಿತ ಕಂಡಿದೆ.

ಯುಎಸ್ ಡಾಲರ್ ಎದುರು ರುಪಾಯಿ ಭಾರಿ ಕುಸಿತ ಕಂಡಿದ್ದು, ಪ್ರತಿ ಡಾಲರ್ ವಿರುದ್ಧ ರುಪಾಯಿ ಮೌಲ್ಯ 82.30 ರು ದಾಟಿದೆ.

ಡಾಲರ್‌ ವಿರುದ್ಧ ಭಾರತೀಯ ಕರೆನ್ಸಿಯು 82.30 ರು ನಂತೆ ವಹಿವಾಟು ನಡೆಸುತ್ತಿದೆ. ಕರೆನ್ಸಿ 82.19 ರಂತೆ ವಹಿವಾಟು ಪ್ರಾರಂಭ ವಾಯಿತು ಮತ್ತು ಸಾರ್ವಕಾಲಿಕ ಕನಿಷ್ಠ 82.33 ಅನ್ನು ಮುಟ್ಟಿದೆ.

ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಚೇತರಿಕೆ ಕಂಡಿತ್ತು. ಬಿಎಸ್‌ಇ ಸೆನ್ಸೆಕ್ಸ್ 156.67 ಪಾಯಿಂಟ್‌ಗಳ ಇಳಿಕೆಯೊಂದಿಗೆ 58,065.43 ಕ್ಕೆ ಮತ್ತು ಎನ್‌ಎಸ್‌ಇ ನಿಫ್ಟಿ 44.15 ಪಾಯಿಂಟ್‌ಗಳ ಕುಸಿತದೊಂದಿಗೆ 17,287.65 ಕ್ಕೆ ತಲುಪಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಬದಲಾವಣೆ ಆಗಿಲ್ಲ.

ರಷ್ಯಾ ಮತ್ತು ಉಕ್ರೇನ್‌ ಯುದ್ಧದ ನಡುವೆ ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರಲ್‌ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ ಕುಗ್ಗಿ 94.30 ಯುಎಸ್ ಡಾಲರ್‌ನಷ್ಟಿದೆ.

ಒಪೆಕ್ ತೈಲ ಉತ್ಪಾದನೆ ಕಡಿತಕ್ಕೆ ಮುಂದಾಗಿರುವುದು, ರಷ್ಯಾ -ಉಕ್ರೇನ್ ನಡುವಿನ ಸಂಘರ್ಷ ಮುಂದುವರೆದಿರುವುದು ಕಚ್ಚಾತೈಲ ಬೆಲೆ ಮತ್ತೊಮ್ಮೆ 100 ಪ್ರತಿ ಬ್ಯಾರೆಲ್ ದಾಟುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.