Friday, 13th December 2024

ನಟಿ, ರಂಗಭೂಮಿ ಕಲಾವಿದೆ ಉತ್ತರಾ ಬಾವೋಕರ್ ನಿಧನ

ಪುಣೆ: ನಟಿ ಹಾಗೂ ರಂಗಭೂಮಿ ಕಲಾವಿದೆ ಉತ್ತರಾ ಬಾವೋಕರ್(79 ವರ್ಷ)  ಅವರು ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಿಧನ ರಾದರು.

ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರಾ ಬಾವೋಕರ್ ಮಂಗಳವಾರ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದರು.

ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ದಲ್ಲಿ ನಟನೆಯನ್ನು ಕಲಿತ ಉತ್ತರಾ ಬಾವೋಕರ್ ಅವರು ಮುಕ್ಯಮಂತ್ರಿ ಯಲ್ಲಿ ಪದ್ಮಾವತಿ, ಮೇನ ಗುರ್ಜರಿಯಲ್ಲಿ ಮೇನ, ಶೇಕ್ಸ್‌ಪಿಯರ್‌ನ ಒಥೆಲ್ಲೋದಲ್ಲಿ ಡೆಸ್ಡೆಮೋನಾ, ನಾಟಕಕಾರ ಗಿರೀಶ್ ಕಾರ್ನಾಡ್ ಅವರ ತುಘಲಕ್‌ನಲ್ಲಿ ತಾಯಿ ಸಹಿತ ಮುಂತಾದ ವಿಭಿನ್ನ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಗೋವಿಂದ್ ನಿಹ್ಲಾನಿಯವರ ಚಿತ್ರ ‘ತಮಸ್‌’ನಲ್ಲಿನ ಪಾತ್ರದ ನಂತರ ಉತ್ತರಾ ಬಾವೋಕರ್ ಗಮನ ಸೆಳೆದಿದ್ದರು. ಅವರು ಸುಮಿತ್ರಾ ಭಾವೆ ಅವರ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.