Saturday, 14th December 2024

ಯಂತ್ರದಲ್ಲಿ ತಾಂತ್ರಿಕ ದೋಷ: ಕಾರ್ಮಿಕರನ್ನು ಹೊರತರುವ ಕಾರ್ಯ ಮತ್ತೆ ಸ್ಥಗಿತ

ವದೆಹಲಿ: ಆಗರ್ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರನ್ನು ಹೊರತರುವ ಕಾರ್ಯ ಮತ್ತೆ ಸ್ಥಗಿತಗೊಂಡಿದೆ.

ಇದುವರೆಗೆ ಸಿಲ್ಕ್ಯಾರಾ ಸುರಂಗದಲ್ಲಿ ರಕ್ಷಕರು 46.8 ಮೀಟರ್ ವರೆಗೆ ಕೊರೆದಿದ್ದಾರೆ.

ಯಂತ್ರವನ್ನು ದುರಸ್ತಿ ಮಾಡಲಾಗುತ್ತಿದೆ. ಇದು ಕೆಲವು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಬೇರೆ ಯಾವುದೇ ಸಮಸ್ಯೆ ಉದ್ಭವಿಸ ದಿದ್ದರೆ, ರಕ್ಷಣಾ ಕಾರ್ಯಾಚರಣೆಯು ಪುನರಾರಂಭಗೊಳ್ಳುವ ಸಾಧ್ಯತೆಯಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ, ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಂತಿಮ ಹಂತಕ್ಕೆ ಪ್ರವೇಶಿಸಿರುವ ರಕ್ಷಣಾ ಕಾರ್ಯಾ ಚರಣೆಯನ್ನು ಮೇಲ್ವಿಚಾರಣೆ ಮಾಡಲು ಸ್ಥಳದಲ್ಲಿ ರಾತ್ರಿ ತಂಗಿದ್ದರು.